ಮಂಗಳೂರು : ನಗರದ ಉರ್ವ ಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನಕ್ಕೆ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಾಲಾ ಮಠಪತಿ ಅವರು ಭೇಟಿ ನೀಡಿದರು.
ಅಕಾಡೆಮಿಯ ವಿವಿಧ ಕಾರ‍್ಯಕ್ರಮಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಮಂಗಳೂರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ
ನಿರ್ದೇಶಕ ರಾಜೇಶ್ ಜಿ. , ಅಕಾಡೆಮಿ ಮಾಜಿ ಸದಸ್ಯರಾದ ರೂಪಕಲಾ ಆಳ್ವ, ರತ್ನಾವತಿ ಜೆ. ಬೈಕಾಡಿ ಮತ್ತು ಗಾಯಕರಾದ ನಾದ ಮಣಿನಾಲ್ಕೂರು ಉಪಸ್ಥಿತರಿದ್ದರು.

