ಜು. 1: ಮೂಡುಬಿದಿರೆ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ‘ಮಾಧ್ಯಮ ಹಬ್ಬ’ ಕಾರ್ಯಕ್ರಮ

0
40

ಮೂಡುಬಿದಿರೆ: ಮೂಡುಬಿದಿರೆ ಪ್ರೆಸ್‌ ಕ್ಲಬ್‌ (ರಿ.) ತಾಲೂಕು ಪತ್ರಕರ್ತರ ಸಂಘ ಮೂಡುಬಿದಿರೆ ಇದರ ಪತ್ರಿಕಾ ದಿನಾಚರಣೆ ಮಾಧ್ಯಮ ಹಬ್ಬ-2025 ಕಾರ್ಯಕ್ರಮವು ನಾಳೆ (ಜು. 1ರಂದು) ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಮಧ್ಯಾಹ್ನ ಗಂಟೆ 3.00ರಿಂದ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್‌, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಎಕ್ಸ್‌ಲೆಂಟ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್‌ ಜೈನ್‌, ಮಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಭಾಗವಹಿಸಲಿದ್ದಾರೆ. ನ್ಯೂಸ್‌ ಫಸ್ಟ್‌ ಇದರ ಹಿರಿಯ ಸುದ್ದಿ ವಾಚಕ ವಾಸುದೇವಾ ಭಟ್‌ ಮಾರ್ನಾಡು ಅವರಿಗೆ ಪ್ರೆಸ್‌‌ ಕ್ಲಬ್ ಗೌರವ ಪ್ರದಾನ ಹಾಗೂ ಎಸ್‌ಎಸ್‌ಎಲ್‌ಸಿ ಸಾಧಕರಾದ ಕು. ರುಚಿರಾ ಕುಂದರ್‌, ಮಾ. ಸುಶಾಂತ್‌ ದರೆಗುಡ್ಡೆ, ಕು. ಸಿಂಚನಾ ಮೂಡುಮಾರ್ನಾಡು ಅವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದೆ. ವಿಶ್ರಾಂತ ಪರ್ತಕರ್ತ ಸದಾನಂದ ಹೆಗಡೆ ಕಟ್ಟೆ ದತ್ತಿನಿಧಿ ಪ್ರಾಯೋಜಿತ ಡೈಜಿ ವರ್ಲ್ಡ್‌ ಮಾಧ್ಯಮದ ವಾಲ್ಟರ್‌ ನಂದಳಿಕೆ ಅವರಿಂದ ‘ಭವಿಷ್ಯದಲ್ಲಿ ಮಾಧ್ಯಮಗಳಿಗಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ.

LEAVE A REPLY

Please enter your comment!
Please enter your name here