ಮೂಡುಬಿದಿರೆ: ಮೀನುಗಾರಿಕೆ ಇಲಾಖೆ, ದ.ಕ. ಜಿಲ್ಲೆ ಹಾಗೂ ಮೀನುಗಾರಿಕಾ ಮಹಾ ವಿದ್ಯಾಲಯ ಮಂಗಳೂರು ಸಹಭಾಗಿತ್ವದಲ್ಲಿ ಶ್ರೀರಾಜ್ ಮತ್ಸ್ಯ ಫಾರ್ಮ್ ಪಣಪಿಲ ಸಹಯೋಗದಲ್ಲಿ ಮೀನು ಕೃಷಿಕರ ದಿನಾಚರಣೆ ಪ್ರಯುಕ್ತ ಮತ್ಸ್ಯ ಮೇಳೆ-2025 ಮೀನು ಕೃಷಿ ತರಬೇತಿ ಕಾರ್ಯಕ್ರಮ (ಮೀನು ಹಿಡಿಯುವುದು ಮತ್ತು ಮಾರಾಟ) ಜು. 12 ಮತ್ತು 13 ರಂದು ಬೆಳಿಗ್ಗೆ 10-30ರಿಂದ ಮೂಡುಬಿದಿರೆಯ ಪಣಪಿಲ ಶ್ರೀ ರಾಜ್ ಮತ್ಸ್ಯ ಫಾರ್ಮ್ ಕೊಟ್ಟಾರಿಬೆಟ್ಟು ಇಲ್ಲಿ ಜರಗಲಿದೆ.
ಮೇಳದಲ್ಲಿ ಶುದ್ಧ ನೀರಿನಲ್ಲಿ ನೈಸರ್ಗಿಕ ಆಹಾರ ನೀಡಿ ಪೌಷ್ಠಿಕವಾಗಿ ಬೆಳೆದ ಉತ್ತಮ ಗುಣಮಟ್ಟದ ತಾಜಾ ಆಹಾರ ಸಮುದ್ರದ ಮೀನಿಗಿಂತ ವಿಶೇಷ ರುಚಿವುಳ್ಳ ಜೀವಂತ ಮೀನುಗಳ ಮಾರಾಟ ನಡೆಯಲಿದೆ.