ಕ. ಜಿ. ಪಂ. ಕಿ. ಪ್ರಾ ಶಾಲೆ ಏಮಾಜೆಯಲ್ಲಿ ಆರಂಭಗೊಂಡ “ಜ್ಞಾನವಾಹಿನಿ -2025_” ವಿನೂತನ ಯೋಜನೆ

0
22

ಬಂಟ್ವಾಳ : ಒಬ್ಬರ ವಿದ್ಯಾದಾನ ನೂರಾರು ಮಕ್ಕಳ ಜ್ಞಾನ ವರ್ಧನೆಯ ಮೊದಲ ಹೆಜ್ಜೆಯಾಗಬಹುದು ಎಂಬ ಆಶಯದೊಂದಿಗೆ ದ. ಕ. ಜಿ. ಪಂ. ಕಿ. ಪ್ರಾ ಶಾಲೆ ಏಮಾಜೆಯಲ್ಲಿ “ಜ್ಞಾನವಾಹಿನಿ -2025” ಎಂಬ ವಿನೂತನ ಯೋಜನೆಯನ್ನು ಗುರುವಾರ ಮಂಗಳೂರು ಎ.ಜೆ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ ಉದ್ಘಾಟಿಸಿ. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾಗುವ ಇಂತಹ ಯೋಜನೆಗಳು ಮೂಡಿ ಬರುತ್ತಿರುವುದು ಶ್ಲಾಘನೀಯ ಎಂದರು.

ಯೋಜನೆಯ ವಿವರ ಸರಕಾರಿ ಶಾಲೆಯನ್ನು ಉಳಿಸುವ ದೃಷ್ಟಿಯಲ್ಲಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಿ ( ಎಲ್ ಕೆ ಜಿ ಹಾಗೂ ಯು ಕೆ ಜಿ), ಆ ತರಗತಿ ಶಿಕ್ಷಕರಿಗೆ ವೇತನ ಹಾಗೂ ಮಕ್ಕಳಿಗೆ ಯಾವುದೇ ಸೌಲಭ್ಯಗಳು ಸರಕಾರ ವತಿಯಿಂದ ಸಿಗದ ಕಾರಣ ಅದರ ಖರ್ಚು ವೆಚ್ಚಗಳನ್ನು ಬರಿಸುವ ಉದ್ದೇಶದಿಂದ ವಾರ್ಷಿಕ ತಲಾ 1000/- ದಂತೆ 100ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದುವ ಗುರಿಯನ್ನು ಹೊಂದಿ ಆ ಮೂಲಕ ಖರ್ಚು ವೆಚ್ಚಗಳನ್ನು ಬರಿಸುವ ಉದ್ದೇಶಕ್ಕಾಗಿ ರೂಪಗೊಂಡ ಯೋಜನೆ ಆಗಿರುತ್ತದೆ.

ಈ ಯೋಜನೆಗೆ ಈಗಾಗಲೇ ಹಲವಾರು ಸಹೃದಯಿ ವಿದ್ಯಾಭಿಮಾನಿಗಳು ಒಮ್ಮತದ ಸಹಕಾರವನ್ನು ನೀಡುತ್ತಿದ್ದು, ಈ ಯೋಜನೆಗೆ ದೇಶ ವಿದೇಶಗಳಲ್ಲಿರುವ ನಮ್ಮೂರ ವಿದ್ಯಾಭಿಮಾನಿಗಳ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎನ್ನುತ್ತಾರೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾ ಗಣೇಶ್ ಆಚಾರ್ಯ, ಕಳೆದ ಶುಕ್ರವಾರ ಶಾಲಾ ಅಭಿವೃದ್ಧಿ ಸಮಿತಿಯೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದು ಇವತ್ತಿಗೆ ಇದರ ಸದಸ್ಯರ ಸಂಖ್ಯೆ ನೂರರ ಗಡಿ ದಾಟಿ ಮುಂದುವರೆಯುತ್ತಿದ್ದು ನೋಡುವಾಗ ಸರಕಾರಿ ಶಾಲೆ ಉಳಿಸು ದೃಷ್ಟಿಯಿಂದ ಆರಂಭಿಸಿದ ಯೋಜನೆ ಸಾರ್ಥಕ ಅನಿಸುತ್ತದೆ ಎನ್ನುತ್ತಾರೆ.

ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಕಾರ್ಯಕ್ರಮದ ಉದ್ಘಾಟನಾ ಈ ಸಂದರ್ಭದಲ್ಲಿ ನೆಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಮಿತ ಡಿ ಪೂಜಾರಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಹರೀಶ್ ಕುಲಾಲ್, ಪಂಚಾಯತ್ ಸದಸ್ಯರುಗಳಾದ ಶಕೀಲಾ ಕೃಷ್ಣ ಮಿತ್ತ ಕೋಡಿ, ಧನಂಜಯ ಗೌಡ, ಎಸ್. ಡಿ.ಎಂ. ಸಿ ನಿಕಟ ಪೂರ್ವ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಆಚಾರ್ಯ, ಶಾಲಾ ನಾಯಕಿ ರಿದಿಕಾ ಶೆಟ್ಟಿ, ಉಪ ನಾಯಕಿ ವರ್ಷ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ವಿದ್ಯಾರ್ಥಿ ಪೋಷಕರು, ಊರ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯ ಚಂದ್ರ ವಂದಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿರಾದ ದೀಕ್ಷ ಹಾಗೂ ಐಸಮ್ಮ ಸಹಕರಿಸಿದರು.

LEAVE A REPLY

Please enter your comment!
Please enter your name here