ಕಾಪು : ತುಳು ರಂಗಭೂಮಿ ಕಲಾವಿದ, ಕಾಪು ರಂಗ ತರಂಗ ನಾಟಕ ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ ಸುಜಿತ್ ಶೆಟ್ಟಿ ಪಾದೂರು ನಿಧನ

0
35

ಕಾಪು : ತುಳು ರಂಗಭೂಮಿ ಕಲಾವಿದ, ಕಾಪು ರಂಗ ತರಂಗ ನಾಟಕ ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ ಸುಜಿತ್ ಶೆಟ್ಟಿ ಪಾದೂರು (54) ಶುಕ್ರವಾರ ನಿಧನ ಹೊಂದಿದರು.

ಪ್ರಸಿದ್ಧ ರಂಗ ಕಲಾವಿದರಾಗಿದ್ದ ಅವರು ಹಾಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯರಾಗಿ, ತಂಡದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ಕೆಲವು ಸಮಯಗಳಿಂದ ಅಸೌಖ್ಯದಿಂದಾಗಿ ನಟನೆಯಿಂದ ದೂರ ಉಳಿದಿದ್ದರು.

ಮೃತರು ಪತ್ನಿ, ಕಾಪು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here