ಪಡುಬಿದ್ರಿ : ಏ:03 “ಸಂಗೀತಕ್ಕೆ ತಲೆದೂಗದವರು ಯಾರೂ ಇಲ್ಲ .ಮನುಷ್ಯರಿಗಷ್ಟೆ ಅಲ್ಲ ಸಸ್ಯ, ಪ್ರಾಣಿ, ಪಕ್ಷಿ, ನಿಸರ್ಗವೇ ಸಂಗೀತಕ್ಕೆ ಸ್ಪಂದಿಸುತ್ತದೆ ಬಾಲ್ಯದಲ್ಲಿ ಸಂಗೀತಾಸಕ್ತಿ ಬಂದರೆ ಹೆಚ್ಚಿನ ಕಲಿಕೆಗೆ ತರಬೇತಿಗೆ ಅವಕಾಶವಾಗುತ್ತದೆ , ವಿದ್ಯಾರ್ಥಿ ದಿಸೆಯಲ್ಲಿ ಹಾಡುಗಾರಿಕೆ ಅಭ್ಯಾಸ ಮಾಡಿಕೊಂಡರೆ ಭವಿಷ್ಯ ಕಟ್ಟಿಕೊಳ್ಳಲು ಪೂರಕವಾಗುತ್ತದೆ .ಇಂತಹ ಸ್ಪರ್ಧಾ ಕಾರ್ಯಕ್ರಮಗಳು ನಡೆದಾಗ ಗ್ರಾಮೀಣ ಪ್ರದೇಶದ ಒಳ್ಳೆಯ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ. ಎಂದು ಯುವ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ ಹೇಳಿದರು.

ಅವರು ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ” VOICE OF PAFUBIDRI-2026 “ಉಡುಪಿ ಜಿಲ್ಲಾ ಮಟ್ಟದ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ” ಸಂಗೀತವು ಮಾನವನ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಮನಸ್ಸಿ ” ಪಡುಬಿದ್ರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಪಡುಬಿದ್ರಿ ಹೇಳಿದರು .
ವಾಯ್ಸ್ ಆಫ್ ಪಡುಬಿದ್ರಿ -2026 ಉಡುಪಿ ಜಿಲ್ಲಾ ಮಟ್ಚದ ಕರೋಕೆ ಗಾಯನ ಸ್ಪರ್ಧೆಯ ವಿಜೇತರು ಸೀನಿಯರ್ ವಿಭಾಗ : ಪ್ರಥಮ – ಉದಯ್ ಎರ್ಮಾಳ್, ದ್ವಿತೀಯ – ಭಕ್ತವತ್ಸಲ ವಿ.ಮೆಂಡನ್, ತೃತೀಯ – ಜಗದೀಶ್ ಸಾಲ್ಯಾನ್ ಕಲ್ಲಟ್ಟೆ
ಜೂನಿಯರ್ ವಿಭಾಗ :- ಪ್ರಥಮ-ಶಾರ್ವಿ ಪಡುಬಿದ್ರಿ, ದ್ವಿತೀಯ – ವ್ಯೆಭವ್ ಎಮ್ ಆಚಾರ್ಯ, ತೃತೀಯ – ನಿಹಾನ್ ಎಸ್ ಶೆಟ್ಟಿ.
ಈ ಸಂದರ್ಭದಲ್ಲಿ ಓಂಕಾರ್ ಕಾಸ್ಚೋಮ್ಸ್ & ಕಲಾ ಸಂಗಮ ಪಡುಬಿದ್ರಿ ಆಡಳಿತ ನಿರ್ದೇಶಕಿ ಗೀತಾ ಅರುಣ್ , ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ , ಚಿತ್ರಕಲಾವಿದ/ ಸಾಹಿತಿ ಸುರೇಶ್ ಪಡುಬಿದ್ರಿ, ಖ್ಯಾತ ರಿದಮ್ ವಾದಕ ದಿನೇಶ್ ಪಡುಬಿದ್ರಿ, ತುಳುನಾಡ ಕಲಾವಿದರು(ರಿ) ಪಡುಬಿದ್ರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ರೋಟರಿ ಕಾರ್ಯದರ್ಶಿ ಪವನ್ ಸಾಲ್ಯಾನ್ , ಕಾರ್ಯಕ್ರಮ ನಿರ್ದೇಶಕ ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.

