ದುಬೈನಲ್ಲಿ ಮೊಳಗಲಿದೆ ಕಬಡ್ಡಿಯ ಕಹಳೆ : ಅ.4ರಂದು ನ್ಯೂ ಮಾರ್ಕ್ ಮಂಗಳೂರು ಪಂದ್ಯಾವಳಿ

0
12

ದುಬೈ : ಯಶಸ್ವಿ ಯುಎಈಯ ಕ್ರೀಡಾ ಸಂಘಟಕರಾದ ನೊಯಲ್ ಡಿ ಅಲ್ಮೆಡಾರವರ ನ್ಯೂ ಮಾರ್ಕ್ ಮಂಗಳೂರು ತಂಡ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿವು ಅ. 4 ರಂದು ನಗರದ ಟಾಸ್ ಅಕಾಡೆಮಿಯ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಒಂಬತ್ತು ಗಂಟೆಯಿಂದ ಆರಂಭವಾದ ಕಬಡ್ಡಿ ಪಂದ್ಯಾಟದಲ್ಲಿ ಹದಿನೆಂಟು ತಂಡಗಳು ಭಾಗವಹಿಸಲಿದ್ದು ಯುಎಇಯಲ್ಲಿ ಇರುವ ತುಳು ಕನ್ನಡಿಗರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ನ್ಯೂ ಮಾರ್ಕ್ ತಂಡದ ಸ್ಥಾಪಕ ಸದಸ್ಯರಾದ ನೊಯಲ್ ಡಿ.ಅಲ್ಮೆಡಾರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದುಬೈನಲ್ಲಿ ತನ್ನ ವೃತ್ತಿಯೊಂದಿಗೆ ಪ್ರವೃತ್ತಿಯಾದ ಕ್ರೀಡಾ ಸಂಘಟನೆಯ ಮೂಲಕ ಹೆಸರುವಾಸಿಯಾದ ನೊಯಲ್ ಡಿ.ಅಲ್ಮೆಡಾರವರು ಯುಎಇಯಲ್ಲಿ ಹಲವಾರು ತುಳು, ಕನ್ನಡ, ಕೊಂಕಣಿ ಸಂಘ ಸಂಸ್ಥೆಗಳಲ್ಲಿ ದುಡಿದ ಇವರು ತುಳು ಕೂಟ ದುಬೈ,ಕರ್ನಾಟಕ ಸಂಘ ಶಾರ್ಜಾ,ಮಂಗಳೂರು ಕೊಂಕಣ್ಸ್,ಡೈಜಿ ರಂಗಮಂದಿರ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸ್ಥಾಪಕ ಸದಸ್ಯರು.ಕರ್ನಾಟಕ ಸಂಘ ದುಬೈ,ಸಂಗಮ ಕಲಾವಿದರು ದುಬೈ ಸಂಘಟನೆಗಳ ಮೂಲಕ ಹಲವಾರು ಕಾರ್ಯವನ್ನು ನೀಡಿದ್ದಾರೆ. ಇಂಡಿಯನ್ ಕಬ್ಬಡಿ ಓರ್ಗನೈಸರ್ ಸಂಸ್ಥೆಯ 2023-24 ಸಾಲಿನಲ್ಲಿ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಯುಎಇಯಲ್ಲಿ ಕಬಡ್ಡಿ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ತಮ್ಮ ಸ್ನೇಹಿತರಾದ ರೋಷನ್ ಪಿಂಟೋ,ರಾಕೇಶ್ ಹೆಗ್ಡೆ,ತಾರಾನಾಥ ರೈ,ಅನಿಲ್ ಪತ್ರವೊ,ಸುನೀಲ್ ಡಿ.ಸೋಜಾರವರ ಜತೆ ಸೇರಿ ನ್ಯೂ ಮಾರ್ಕ್ ಎಂಬ ಕಬ್ಬಡಿ ತಂಡವನ್ನು ಸ್ಥಾಪಿಸಿದರು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ