ಬಂಟ್ವಾಳ ತಾಲ್ಲೂಕಿನ ವಗ್ಗ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ ಗುರುವಾರ ನಡೆದ ಯೋಗ ಮಾಹಿತಿ ಕಾರ್ಯಕ್ರಮದಲ್ಲಿ ‘ಸಂಸ್ಕಾರ ಬೇಸಿಗೆ ಶಿಬಿರ’ದ ಶಿಬಿರಾರ್ಥಿಗಳು ಪಾಲ್ಗೊಂಡರು.
ಬಂಟ್ವಾಳ : ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಏ.11ರಂದು ಆರಂಭಗೊAಡಿದ್ದ ‘ಸಂಸ್ಕಾರ ಬೇಸಿಗೆ ಶಿಬಿರ’ ಕಾರ್ಯಕ್ರಮ ಗುರುವಾರ ಸಮಾಪನಗೊಂಡಿತು.
ಕಾಡಬೆಟ್ಟು ಶ್ರೀ ಶಾರದಾಂಬ ಬಾಲಗೋಕುಲ ಮತ್ತು ಶ್ರೀ ಶಾರದಾಂಬ ಭಜನಾ ಮಂದಿರ ವತಿಯಿಂದ ನಡೆದ 6 ದಿನಗಳ ಶಿಬಿರದಲ್ಲಿ ಯೋಗ, ನಿತ್ಯ ಶ್ಲೋಕ, ಭಜನೆ, ಭಗವದ್ಗೀತೆ, ಮಹಾಪುರುಷರ ಕಥೆಗಳು, ಪ್ರಥಮ ಚಿಕಿತ್ಸೆ, ಡ್ರಾಯಿಂಗ್ ಮತ್ತು ಕ್ರಾಫ್ಟ್, ತುಳುನಾಡಿನ ಸಂಸ್ಕೃತಿ, ಅಭಿನಯ ಗೀತೆ, ಅಗ್ನಿಹೋತ್ರ, ಯುಗಾದಿ ಆಚರಣೆ, ಮಾತೃ ವಂದನ, ಪೈಂಟಿಂಗ್, ಮನೆ ಮದ್ದು, ಮೌಲ್ಯ ಶಿಕ್ಷಣ, ಮ್ಯಾಪಿಂಗ್ ಮತ್ತಿತರ ಮಾಹಿತಿ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಯಿತು.
ಗುರುವಾರ ಸಂಜೆ ಸಮಾಪನಗೊಂಡ ಬಳಿಕ ಸ್ಥಳೀಯ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಯೋಗ ಮತ್ತು ಕುಂಭಕ ಯೋಗ ಬಗ್ಗೆ ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾರ್ಗದರ್ಶನ ನೀಡಿದರು.
ಪ್ರಮುಖರಾದ ಗಿರೀಶ್ ಶಿರ್ಲಾಲು, ಕೆ.ಬಾಬು ಸಪಲ್ಯ ಕಾಡಬೆಟ್ಟು, ರಾಜೇಶ್ವರಿ, ಜಯ ಪೂಜಾರಿ ಮತ್ತಿತರರು ಇದ್ದರು.

