ಮೂಡುಬಿದಿರೆ: ಜವನೆರ್ ಬೆದ್ರ ಯುವ ಸಂಘಟನೆ ವತಿಯಿಂದ ‘ಕದಂಬ’ ವನ ಅಭಿಯಾನವು ದಿನಾಂಕ 29/06/2025 ರ ಭಾನುವಾರ ಬೆಳಿಗ್ಗೆ ಗಂಟೆ 9ಕ್ಕೆ ಮೂಡುಬಿದಿರೆಯ ಸ್ವರಾಜ ಮೈದಾನದಲ್ಲಿರುವ ಪುರಾತನ ಮಾರಿಗುಡಿ ಪರಿಸರದಲ್ಲಿ ‘ಕದಂಬ’ ಮರದ ಗಿಡಗಳನ್ನು ನೇಡುವ ಮೂಲಕ ನಡೆಯಿತು.
ಸಾಮಾಜಿಕ ಕೆಲಸ ಕಾರ್ಯಗಳಿಂದ ಸದಾ ಸುದ್ದಿಯಲ್ಲಿರುವ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಂದ ತನ್ನದೇ ಅದ ಛಾಪು ಮೂಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದಿರೆ ಪರಿಸರದಲ್ಲಿರುವ ಹಲವಾರು ದೇವಿ ದೇವಸ್ಥಾನಗಳಲ್ಲಿ ‘ಕದಂಬ’ ಮರಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ 80ಕ್ಕೂ ಅಧಿಕ ಮರಗಳನ್ನು ದೇವಸ್ಥಾನದ ಪರಿಸರ, ಸಂಘಟಕರ ಮನೆಗಳ ಬಳಿ ಹಾಗೂ ಇನ್ನಿತರ ಹಲವಾರು ಸ್ಥಳಗಳಲ್ಲಿ ‘ಕದಂಬ’ ಮರಗಳನ್ನು ನೇಡಲಾಗಿದೆ. ಈ ಬಾರಿ 9 ‘ಕದಂಬ’ ಮರಗಳನ್ನು ನೆಡಲಾಗಿದ್ದು ಅವುಗಳ ಪೋಷಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳಾ ಮಣಿಗಳಿಗೆ ನೀಡಲಾಗಿದ್ದು, ಅಬ್ಬಕ್ಕ ಬ್ರಿಗೇಡ್ ಸಂಘಟನೆಯ ನವ ಮಹಿಳಾ ಮಣಿಗಳು ಈ ೯ ಕದಂಬ ಗಿಡಗಳ ಪೋಷಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಈ ಮೂಲಕ ಜಗನ್ಮಾತೆಗೆ ಪ್ರಿಯವಾಗಿರುವ ‘ಕದಂಬ’ ಮರಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಂಘಟನೆ ನಿತ್ಯ ನಿರಂತರವಾಗಿ ಮಾಡುತ್ತಿದೆ.
‘ಕದಂಬ’ ವನ ಅಭಿಯಾನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆಯ ಎ.ಸಿ.ಎಫ್ ಶ್ರೀಧರ್ ಪಿ, ಭಾರತೀಯ ಜನತಾ ಪಾರ್ಟಿಿ ಇದರ ದಕ್ಷಿಣ ಕನ್ನಡ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಸುದರ್ಶನ್ ಎಂ, ನಿವೃತ್ತ ಸೈನಿಕರಾದ ರಾಜೇಂದ್ರ ಜಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜವನೆರ್ ಬೆದ್ರ ಫೌಂಡೇಶನ್(ರಿ), ಮೂಡಬಿದ್ರೆ ಇದರ ಸ್ಥಾಪಕಧ್ಯಕ್ಷರಾದ ಅಮರ್ ಕೋಟೆ ವಹಿಸಿದ್ದರು.
ಪರಿಸರ ಸ್ನೇಹಿಯಾದ ಈ ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಯುವ ಸಂಘಟನೆಯ ಸಂಚಾಲಕರು ನಾರಾಯಣ ಪಡುಮಲೆ, ಜವನೆರ್ ಬೆದ್ರ ಯುವ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ, ಸಂದೀಪ ಕೆಲಪುತ್ತಿಗೆ ನಿರೂಪಣೆ ಮಾಡಿದರು.
ಅಬ್ಬಕ್ಕ ಬ್ರಿಗೇಡ್ ಸಂಚಾಲಕರು ಸಹನಾ ನಾಯಕ್, ಸಾರಿಕಾ ಹೆಗಡೆ, ಸುಮಲತಾ ಶೆಟ್ಟಿ ‘ಕದಂಬ’ ವನ ಅಭಿಯಾನ ಕಾರ್ಯಕ್ರಮಕ್ಕೆ ಪತ್ರ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜವನೆರ್ ಬೆದ್ರ ಫೌಂಡೇಶನ್(ರಿ), ರಕ್ತ ನಿಧಿ, ಅಬ್ಬಕ್ಕ ಬ್ರಿಗೇಡ್, ಭಕುತಿಯ ಭಜನಾ ಮಂಡಳಿ ಇವುಗಳ ಟ್ರಸ್ಟಿ, ಸಂಚಾಲಕರು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಸಹಕರಿಸಿದರು.