ಅಕ್ರಮ ಗೋ ಹತ್ಯೆ ವಿರುದ್ಧ ಸಮರ ಸಂಗ್ರಾಮ: ಹಿಂದೂ ಜಾಗರಣ ವೇದಿಕೆ : ಮೂಡುಬಿದಿರೆಯಲ್ಲಿ 24X7 ಕಾರ್ಯಾಚರಣೆ

0
5

ಮೂಡಬಿದಿರೆ: ಕಳೆದ ಹಲವರು ವರ್ಷಗಳಿಂದ ಬಕ್ರೀದ್ ಆಚರಣೆಯ ಸಂದರ್ಭದಲ್ಲಿ ಅಕ್ರಮ ಗೋವುಗಳ ಮಾರಣ ಹೋಮ ನಡೆಯುತ್ತಿದ್ದು ಈ ಬಾರಿ ಹೊಸ ಕಾರ್ಯರೂಪು ರೇಷೆಯನ್ನು ಜಾರಿಗೆ ತರಲು ಸ್ವಯಂ ಪ್ರೇರಿತವಾಗಿ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಜಾಗೃತಗೊಂಡಿದೆ.

ಮೂಡುಬಿದಿರೆ ವಲಯದಲ್ಲಿ ಅಕ್ರಮ ಗೋವುಗಳ ಸಾಗಾಟ ಮತ್ತು ಮಾರಣ ಹೋಮ ನಡೆಯುವ ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದು ಪೊಲೀಸ್ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮದ ಮೂಲಕ ತಡೆಯದಿದ್ದಲ್ಲಿ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ನೇರ ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿದೆ.

ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ವಲಯದ ಗೋ ಸಂರಕ್ಷಣಾ ದಳದ ಹಿಂದೂ ಕಾರ್ಯಕರ್ತರು ಈಗಾಗಲೇ ಸಕ್ರಿಯಗೊಂಡಿದ್ದು ದಿನದ 24 ಗಂಟೆಗಳ ಕಾಲ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಿಂದುಗಳ ಮಾತೃ ಸ್ವರೂಪವಾದ ಗೋವುಗಳ ಅಕ್ರಮ ಸಾಗಾಟ ಮತ್ತು ಮಾಂಸ ಮಾರಾಟದ ವಿರುದ್ಧ ಹಲವಾರು ಭಾರಿ ಮನವಿ ಸಲ್ಲಿಸಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.

-ಹರಿಶ್ಚಂದ್ರ ಕೆ.ಸಿ ಸಂಯೋಜಕರು, ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ

LEAVE A REPLY

Please enter your comment!
Please enter your name here