ಕಡಂದಲೆ: ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ ಇಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ದಿನಕರ್ ಕುಂಭಾಶಿ ಅವರು ವಹಿಸಿ, ಮಕ್ಕಳು ಯಾವುದೇ ವ್ಯಸನಗಳಿಗೆ ಆಕರ್ಷಣೆ ಆಗದೇ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೂಡಬಿದಿರೆ ವಕೀಲರಾದ ಸುಚಿತಾ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಮುಖ್ಯ ಅತಿಥಿ ಸಂಪಿಗೆ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಟಿ.ಯನ್. ಕೆಂಬಾರೆ , ಸಂಪಿಗೆ ವಲಯದ ಮೇಲ್ವಿಚಾರಕರಾದ ಶ್ರೀನಿವಾಸ್ ಡಿ. ಉಪಸ್ಥಿತರಿದ್ದರು. ಸದಾಶಿವ ಉಪಾಧ್ಯಾಯ ಧನ್ಯವಾದ ಸಲ್ಲಿಸಿದರು.

