ಪಾಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಗುರುವಾಯನಕೆರೆ ಮಡಂತ್ಯಾರ್ ವಲಯದ ಪಾಲಡ್ಕ ಕಾರ್ಯಕ್ಷೇತ್ರದ ವತಿಯಿಂದ ದ.ಕ.ಜಿ.ಪ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಡ್ಕ ಶಾಲೆಯ ಹೊರಾಂಗಣದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಶೌರ್ಯ ವಿಪತ್ತು ಘಟಕ ಒಕ್ಕೂಟದವರ ಹಾಗೂ ಶಾಲಾ SDMC ತಂಡದ ಸದಸ್ಯರ ಸಹಕಾರದೊಂದಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಕೇಶವ , ಶಾಲಾ SDMC ಅಧ್ಯಕ್ಷ ಪ್ರೀತ್ ಕುಮಾರ , ಕೃಷಿ ಮೇಲ್ವಿಚಾರಕರು ಕೃಷ್ಣ, ಶಾಲಾ ಮುಖ್ಯೋಧ್ಯಾಪಕರಾದ ಶಾಮಲಾ ಪಿ, ಉಪಾಧ್ಯಕ್ಷರು ಶುಭಲತಾ, ವಲಯದ ಅಧ್ಯಕ್ಷರು ಜಯ ಪೂಜಾರಿ, ಪಾಲಡ್ಕ ಒಕ್ಕೂಟದ ಅಧ್ಯಕ್ಷರು ಕುಸುಮಾವತಿ, ಕುದ್ರಡ್ಕ ಒಕ್ಕೂಟದ ಅಧ್ಯಕ್ಷರು ವಿಜಯ ಮಡಕ್ಕಿಲ, ಕಾರ್ಯದರ್ಶಿ ಸವಿತಾ ವಿಪತ್ತು ಘಟಕದ ಸ್ವಯಂಸೇವಕರು, ಗೋಪಾಲ, ಪುಷ್ವರಾಜ ಸಂದೀಪ ಪರಮೇಶ್ವರ ಕುದ್ರಡ್ಕ ಸೇವಾ ಪ್ರತಿನಿಧಿ ನಂದಿನಿ, SDMC ಸದಸ್ಯರು ಪೋಷಕರು, ತಂಡದ ಸದ್ಯರು ಶ್ರಮದಾನದಲ್ಲಿ ಉಪಸಿತರಿದ್ದರು.

