ಕಡೇಶಿವಾಲಯ ವತಿಯಿಂದ ಕೊರತಿ ಗುರಿ ಸ್ವರ್ಗಧಾಮಕ್ಕೆ ಶಿವನ ಮೂರ್ತಿ ಹಸ್ತಾಂತರ

0
34

ಕಲ್ಲಡ್ಕ : ಬಿರುವೇರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಸಂಸ್ಥೆಯ ಈ ವರ್ಷದ ಮಹತ್ವಾಕಾಂಕ್ಷೆ ಯೋಜನೆಯಾದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಕೊರತಿಗುರಿ ಮೋಕ್ಷಧಾಮದಲ್ಲಿ ಶಿವನ ಮೂರ್ತಿಯನ್ನು ರಚಿಸಿ ಸಂಘಟನೆಯ ವತಿಯಿಂದ ವಿದ್ಯುಕ್ತವಾಗಿ ಹಸ್ತಾಂತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿರುವೆರ್ ಕಡೇಶಿವಾಲಯದ ಅಧ್ಯಕ್ಷರಾದ ಯಶವಂತ್ ಸಾಲಿಯಾನ್ ಪತ್ತುಕೊಡಂಗೆ, ಸ್ವರ್ಗಧಾಮದ ಅಧ್ಯಕ್ಷರಾದ ಜಯರಾಮ್ ರೈ ಪಾಚುಕೋಡಿ, ಕಡೇಶಿವಾಲಯ ಗ್ರಾಮ ಪಂಚಾಯತಿಯ ಅಬಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್, ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ರಾವ್, ಮತ್ತು ಸದಸ್ಯರುಗಳು, ಸಾಂತಪ್ಪ ಪೂಜಾರಿ ಪಚ್ಚಾಡಿಬೈಲು, ನವೀನ್ ಚಂದ್ರ ಬಾವಾಗುತ್ತು, ಸುರೇಶ್ ಕಣ್ಣೊಟ್ಟು, ಧರ್ಣಪ್ಪ ಪೂಜಾರಿ ಕಣ್ಣೊಟ್ಟು ಲೋಕನಾಥ ಪೂಜಾರಿ ತಿಮರಾಜೆ , ವಿದ್ಯಾಧರ್ ಪೂಜಾರಿ ಅಣ್ಣೆಂಗಳ,ಲೋಕಯ್ಯ ಪೂಜಾರಿ ಕುರುಮ್ಲಾಜೆ, ಸಂಜೀವ ಪೂಜಾರಿ ದಾಸಕೋಡಿ, ಗುರುಪ್ರಸಾದ್ ಕಲ್ಲಾಜೆ, ದಿನೇಶ್ ಸುರ್ಲಾಜೆ,ಪುಷ್ಪರಾಜ್ ಸತ್ತಿಕಲ್ಲು ಲಯನ್ಸ್ ಕ್ಲಬ್ ನ ಸದಸ್ಯರಾದ ಕೂಸಪ್ಪ ಪೂಜಾರಿ ಪುಣ್ಕೇದಡಿ,ನಿತಿನ್ ಅರ್ಬಿ, ಸೀತಾರಾಮ ಮುಚ್ಚಿಲ, ಉಮೇಶ್ ದಾಳಿಂಬ, ದಯಾನಂದ ಕೋಡಿ, ಶಿನಪ್ಪ ಕಡೇಕೋಳಿಮಜಲು ಊರಿನ ಹಿರಿಯರು, ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here