ಕೈಕುಂಜೆ-ಅಲೆತ್ತೂರು ಸಂಪರ್ಕ ರಸ್ತೆ , ಕಿರು ಸೇತುವೆ ಉದ್ಘಾಟನೆ

0
7

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕೈಕುಂಜೆ -ಅಲೆತ್ತೂರು ಪಂಜುರ್ಲಿ ದೈವಸ್ಥಾನ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಮತ್ತು ರೂ 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಿರು ಸೇತುವೆಯನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಇವರು ಉದ್ಘಾಟಿಸಿದರು.

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಸ್ತೆ ಸಂಪರ್ಕ ಪ್ರಮುಖ ಕೊಂಡಿಯಾಗಿದ್ದು, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಪುರಸಭಾ ಮಾಜಿ ಸದಸ್ಯ ಎ.ಗೋವಿಂದ ಪ್ರಭು, ಬಿಜೆಪಿ ಬೂತ್ ಅಧ್ಯಕ್ಷ ಶಿವರಾಜ್ ಕೈಕುಂಜೆ, ನಿತಿನ್ ಅಲೆತ್ತೂರು, ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುರೇಶ್ ಟೈಲರ್ ಕೈಕಂಬ, ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಶೆಟ್ಟಿ ಕೈಕಂಬ, ಮಂಗಳ ಫ್ರೆಂಡ್ಸ್ ಅಲೆತ್ತೂರು ಅಧ್ಯಕ್ಷ ಶ್ರೀಧರ್ ಶೆಟ್ಟಿ, ಪ್ರಮುಖರಾದ ಅಶ್ವಥ್ ಶೆಟ್ಟಿ ಅಲೆತ್ತೂರು, ವಿಜಯ್ ಅಲೆತ್ತೂರು, ಪ್ರಣಾಮ್ ರಾಜ್, ಮಹೇಶ್ ಜುಮಾದಿಗುಡ್ಡೆ ಮತ್ತಿತರರು ಇದ್ದರು.