ಉಡುಪಿ: ಕಾಲ ಭೈರವ ಜಯಂತಿ ಹಿಂದೂ ಧರ್ಮದಲ್ಲಿ ಶಿವನ ಅವತಾರವಾದ ಕಾಲ ಭೈರವನಿಗೆ ಸಮರ್ಪಿತವಾದ ಒಂದು ಪ್ರಮುಖ ಹಬ್ಬವಾಗಿದೆ. ದುಷ್ಟ ಶಕ್ತಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, ಯಾವುದೇ ಅಪಾಯಗಳಿಂದ ಅಥವಾ ಅಸ್ವಾಭಾವಿಕ ಸಾವಿನಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಳ್ಳಲು ಮತ್ತು ಅಸ್ವಾಭಾವಿಕ ಘಟನೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ದಿನ ಶ್ರೀ ಕ್ಷೇತ್ರದಲ್ಲಿ ಅಘೋರ ಅಖಾಡ್ ನ ಶ್ರೀ ಮಧನ್ ನಾಥ್ ಜೀ ಯವರ ನೇತೃತ್ವದಲ್ಲಿ ಅಘೋರಿಗಳಿಂದ ಅಘೋರ ಭೈರವ ಹವನ್ ನಡೆಯಲಿದ್ದು ಭಕ್ತರಿಗೆ ಅಘೋರ ಹವನ್ ಗಂಟು ಯಜ್ಞಕ್ಕೆ ಸಮರ್ಪಿಸಲು ಅವಕಾಶವಿದ್ದು ಮಧ್ಯಾಹ್ನ ಮಹಾಪ್ರಸಾದ ಸಂಜೆ ದೀಪೋತ್ಸವ ಹಾಗೂ ಭೈರವ ಬಲಿತರ್ಪಣ ಸೇವೆ ನಡೆಯಲಿದೆ. ಈ ಒಂದು ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಶ್ರೀ ಕ್ಷೇತ್ರ ಮಂಡಳಿ ಸರ್ವರನ್ನು ಸ್ವಾಗತಿಸುತಿದೆ

