ಕಲ್ಲಡ್ಕ ವಲಯ ಮಟ್ಟದ 14ರ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟ

0
13

ಕಲ್ಲಡ್ಕ : ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೋಳಂತೂರು ಇಲ್ಲಿ ಕಲ್ಲಡ್ಕ ವಲಯ ಮಟ್ಟದ 14ರ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟ ಸೆಪ್ಟೆಂಬರ್ 1 ಮಂಗಳವಾರ ನಡೆಯಿತು. ಅಂತರಾಷ್ಟ್ರೀಯ ಮಟ್ಟದ ಆಟಗಾರ ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಶಂಕರ ವಿ ಕಲ್ಲಡ್ಕ, ಉದ್ಘಾಟಿಸಿ ಕ್ರೀಡೆಯಲ್ಲಿ ಶಿಸ್ತು ಬಹಳ ಪ್ರಾಮುಖ್ಯತೆ ಪಡೆಡಿದ್ದು, ತೀರ್ಪುಗಾರರ ತೀರ್ಮಾನಕ್ಕೆ ತಲೆಬಾಗಿ ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಕೂಟದ ನೀತಿ ನಿಯಮಗಳಿಗೆ ಬದ್ಧರಾಗಿ ಎಂದರು. .ಎಸ್.ಡಿ.ಎಂ.ಸಿ.ಅಧ್ಯಕ್ಷ ಬಶೀರ್ ನಾರಂಕೋಡಿ ಅಧ್ಯಕ್ಷತೆ ವಹಿಸಿದರು.

ಕಬಡ್ಡಿ ನಮ್ಮ ಭಾರತದ ಸಾಂಪ್ರದಾಯಿಕ ಮತ್ತು ಅತ್ಯಂತ ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿದೆ. ಇದು ಕೇವಲ ಒಂದು ಆಟವಲ್ಲ; ನಮ್ಮ ಸಂಸ್ಕೃತಿ ಮತ್ತು ಮಣ್ಣಿನ ಶಕ್ತಿಯ ಸಂಕೇತವಾಗಿದೆ. ಇಂದು ಈ ಆಟವು ಹಳ್ಳಿಯಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದ ‘ಪ್ರೊ ಕಬಡ್ಡಿ’ ವರೆಗೆ ಬೆಳೆದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಪ್ರಭಾರ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಶಾಲಾ ಮಟ್ಟದ ಕಬಡ್ಡಿ ಪಂದ್ಯಗಳಿಂದಲೇ ಪ್ರತಿಭಾವಂತ ಕ್ರೀಡಾಪಟುಗಳು ಆಯ್ಕೆಯಾಗಿ ತಾಲೂಕು ಜಿಲ್ಲೆ, ರಾಜ್ಯ ಹಾಗೂ ‘ಪ್ರೊ ಕಬಡ್ಡಿ’ ಮತ್ತು ದೇಶದ ರಾಷ್ಟ್ರೀಯ ತಂಡದವರೆಗೆ ಬೆಳೆಯುತ್ತಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳಲ್ಲೇ ಮುಳುಗಿರುವ ಮಕ್ಕಳಿಗೆ ಕಬಡ್ಡಿಯಂತಹ ಮಣ್ಣಿನ ಆಟಗಳು ಅತ್ಯಂತ ಅವಶ್ಯಕವಾಗಿವೆ. ಶಾಲಾ ಮೈದಾನದ ಧೂಳಿನಲ್ಲಿ ಆಡಿ ಬೆಳೆಯುವ ವಿದ್ಯಾರ್ಥಿಯೇ ಮುಂದೆ ಸದೃಢ ಸಮಾಜದ ಯುವಶಕ್ತಿಯಾಗುತ್ತಾನೆ. ಆದ್ದರಿಂದ ನಮ್ಮ ಶಾಲೆಗಳಲ್ಲಿ ಕಬಡ್ಡಿ ಪಂದ್ಯಗಳನ್ನು ಇನ್ನು ಹೆಚ್ಚಿನ ಪ್ರೋತ್ಸಾಹದೊಂದಿಗೆ ಆಯೋಜಿಸೋಣ ಎಂದು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಹೇಳಿದರು. ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಇಬ್ರಾಹಿಂ ಕರೀಂ, ಬಿಕೆ ಬಾಯ್ಸ್ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಮುಸ್ತಾಪ ಬಂಗಾರ್ಕೋಡಿ , ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಶ್ರಫ್, ಅನ್ಸಾರ್, ಸ್ವಚ್ಛತಾ ಪ್ರೇಮಿ ಹಮೀದ್,ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಇಂದುಶೇಖರ್, ಕಲ್ಲಡ್ಕ ಕ್ಲಸ್ಟರ್ ನ ಸಿ .ಆರ್.ಪಿ. ಜ್ಯೋತಿ,ಕಲ್ಲಡ್ಕ ವಲಯದ ಪಂದ್ಯಾಟಗಳ ನೋಡಲ್ ಜಗದೀಶ್ ಬಾಳ್ತಿಲ,ಶಾಲಾ ಮುಖ್ಯ ಶಿಕ್ಷಕಿ ಸುಜಾತ ಎಂ, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಸ್ವಾಗತಿಸಿ, ಶಿಕ್ಷಕಿ ರೂಪಶ್ರೀ ಕಾರ್ಯಕ್ರಮ ನಿರೂಪಿಸಿದರು.