ಅತ್ತಾವರ ಶ್ರೀ ಶಿವರಾಮರಾಯರ ಮನೆಯ ಹಿರಿಯ ಸದಸ್ಯೆ ಸುಶೀಲಾ ವಿಶ್ವನಾಥ್ ರಾವ್ ಅವರಿಗೆ ಕನ್ನಡ ಭವನದಿಂದ ಗೌರವಾರ್ಪಣೆ

0
60

ಕಾಸರಗೋಡು : ಅವಿಬಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಮರಾಜ ಕ್ಷತ್ರಿಯ ಜನಾಂಗದ ಪ್ರಥಮ ಪರಿಷತ್ತು (1932 ಡಿಸೆಂಬರ್ 31,ಶನಿವಾರ )ಮಂಗಳೂರಿನಲ್ಲಿ ಅತ್ತಾವರ ಶಿವರಾಮರಾಯರ ಕಾರ್ಯದರ್ಶಿತ್ವದಲ್ಲಿ ಇವರದೇ ಮನೆ ವಠಾರದಲ್ಲಿ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮಿಜಿಗಳವರ ಘನ ಅದ್ಯಕ್ಷತೆಯಲ್ಲಿ ನಡೆದಿತ್ತು. ಸಮಾಜದ ಸುಮಾರು 200ಮಂದಿ ದುರೀಣರು ಅಂದು ಪ್ರಥಮ ಪರಿಷತ್ತಿನಲ್ಲಿ ಭಾಗವಹಿಸಿದ್ದರು.
ಹರಿದು ಹಂಚಿ ಹೋಗಿದ್ದ ಸಮಾಜ ಬಂಧುಗಳನ್ನು ಒಂದಾಗಿಸಿ, ಮೊಕ್ತೇಸರಿಕೆಯ ಕಟು ಜಾತಿ ಕಟ್ಟುಪಾಡುಗಳ, ಜಾತಿ ವ್ಯವಸ್ಥೆಯ ಹಿಡಿತದಿಂದ, ಕಾಲಮಾನದ ಸಾಮಾಜಿಕ ಬದಲಾವಣೆಗಳಿಗನುಸಾರವಾಗಿ, ಅಂದಿನ ಸಮಾಜದಲ್ಲಿದ್ದ ಅಸಮಾನತೆ, ಉಚ್ಚ -ನೀಚ, ಮೇಲು -ಕೀಳೆಎಂಬ ಕೀಳರಿಮೆ ತಾಂಡವವಾಡುತ್ತಿರುವ ಸಮಯದಲ್ಲಿ, ಗುರು ಹಾಗೂ ಗಾಂಧಿ ಸಂವಾದ ಜನರಲ್ಲಿ ಸಾಮಾಜಿಕ ಸ್ಥಾನ ಮಾನ ಪಡೆಯಬೇಕು, ಮತ್ತೆ ಕ್ಷಾತ್ರ ತೇಜ ಎದ್ದು ನಿಲ್ಲಬೇಕು ಎಂಬ ಚಿಂತನೆಯನ್ನು ಮುಂದಿಟ್ಟು, ವಿಶೇಷವಾಗಿ ಸ್ತ್ರೀ ಸ್ವಾತಂತ್ರ ಸ್ಥಾನ ಮಾನ, ಮಹಿಳೆಯರಿಗೆ ವಿದ್ಯಾಭ್ಯಾಸ ಅರ್ಹತೆ,, “ಸಂಘ ಶಕ್ತಿಯಿಂದ ಮಾತ್ರ ಸಮಾಜದಲ್ಲಿ ಎದ್ದು ನಿಲ್ಲಲು ಸಾಧ್ಯ ಎಂಬ ಕರೆಯೊಂದಿಗೆ, ಸಮಾಜ ಒಗ್ಗಟ್ಟಾಗಿ ವಿಸ್ಟ್ರಿತ ಸಮಾಜದಲ್ಲಿ ಸ್ಥಾನ ಮಾನಾದಿಗಳನ್ನು ಪಡೆಯಬೇಕು, ಮತ್ತೆ ಕ್ಷಾತ್ರ ತೇಜ ಮೆರೆಯುವಂತಾಗಬೇಕೆಂದು ಶ್ರೀ ಭಿಕ್ಷು ಸ್ವಾಮಿಜಿಗಳ ಪ್ರಥಮ ಪರಿಷತ್ತಿನ ಪ್ರವಚನ ಬಿತ್ತರಿಸಿದ ಪುಣ್ಯ ನೆಲ ಅತ್ತಾವರ ಶ್ರೀ ಶಿವರಾಮ ರಾಯರ ಮನೆ ವಠಾರ.

ಇದೇ ಪುಣ್ಯ ನೆಲದಲ್ಲಿ ಶ್ರೀ ಸ್ವಾಮಿಜಿಗಳ ಅದ್ಯಕ್ಷತೆಯಲ್ಲಿ ಮಂಡಲ ಕಾರ್ಯದರ್ಶಿ ಗಳಾದ ಶ್ರೀ ಅತ್ತಾವರ ಶಿವರಾಮರಾಯರ ಅಪೂರ್ವ ಸಾಹಸದಿಂದ ಪರಿಷತ್ತು ಯಶಸ್ವಿಯಾಗಿ ನಡೆಯಿತು ಎಂದು ಸ್ವಾಮಿಜಿಗಳು ಮದ್ರಾಸಿನಿಂದ ಪ್ರಕಟಿಸುತ್ತಿದ್ದ “ಶ್ರೀ ಸರಸ್ವತಿ “ಎಂಬ ಕನ್ನಡ ಮಾಸಪತ್ರಿಕೆಯಲ್ಲಿ 1933 ಫೆಬ್ರವರಿ ತಿಂಗಳ ಸಂಚಿಕೆ 19 ರಲ್ಲಿ (ಬೇಕಲ ರಾಮನಾಯಕ, ಸರಸ್ವತಿ ಸಂಘ ಮದ್ರಾಸು ) ವರದಿ ಮಾಡಿದ್ದಾರೆ.
ಶ್ರೀ ಭಿಕ್ಷು ಸ್ವಾಮೀಜಿ ಗಳೊಂದಿಗೆ ಸಂಘ ಕಟ್ಟಿದವರಲ್ಲಿ ಪ್ರಾಥಸ್ಮರಣೀಯರಾದ ಅತ್ತಾವರ ಶಿವರಾಮ ರಾಯರ ಮನೆಗೆ ಕನ್ನಡ ಭವನ ಕಾಸರಗೋಡು ಕೇಂದ್ರ ಸಮಿತಿ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಸಂಚಾಲಕಿ ಸಂದ್ಯಾ ರಾಣಿ ಟೀಚರ್, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷೆ ಶ್ರೀಮತಿ ರೇಖಾ ಸುದೇಶ್ ರಾವ್ ಇವರ ಸಹಕಾರದೊಂದಿಗೆ ಅತ್ತಾವರದ “ಡೆಕ್ಕಾನ್ ಹೌಸ್ “ಗೆ ತೆರಳಿ ಶ್ರೀ ಶಿವರಾಮ ರಾಯರ ಪುತ್ರ ದಿ. ವಿಶ್ವನಾಥ್ ರಾವ್ ಪತ್ನಿ, ಮನೆಯ ಹಿರಿಯ ಸದಸ್ಯೆ ಸುಶೀಲಾ ವಿಶ್ವನಾಥ್ ರಾವ್ ಹಾಗೂ ಮಕ್ಕಳಾದ ಅತ್ತಾವರ ಅಮರನಾಥ್, ಅತ್ತಾವರ ಭರತ್ ಇವರನ್ನು ಭೇಟಿ ಮಾಡಿ ಸಂವದಿಸಿ ಕೃತಾರ್ಥರಾದೆವು.

ಕನ್ನಡ ಭವನದ ಪರವಾಗಿ ಮನೆಯ ಹಿರಿಯರಾದ ಸುಶೀಲಾ ವಿಶ್ವನಾಥ್ ರಾವ್ ರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕನ್ನಡ ಭವನ ಕೇಂದ್ರ ಸಮಿತಿ ಅಧ್ಯಕ್ಷರೂ, ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪಾಧ್ಯಕ್ಷರು ಆದ ಡಾ. ವಾಮನ್ ರಾವ್ ಬೇಕಲ್ ಗೌರವಿಸಿದರು. ಅತ್ತಾವರ ಶಿವರಾಮರಾಯರ ಮೊಮ್ಮಗ ಅತ್ತಾವರ ಅಮರ್ ನಾಥ್ ಶಿವರಾಮ ರಾಯರ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಭವನ ದ. ಕ. ಜಿಲ್ಲಾಧ್ಯಕ್ಷೆ, ವಿಶ್ವ ರಾಮಕ್ಷತ್ರಿಯ ಮಹಾಸಂಘ, ಸಂಪಾದಕಿ, ಶಿಕ್ಷಕಿ ರೇಖಾ ಸುದೇಶ್ ರಾವ್ ಸ್ವಾಗತಿಸಿ, ಅತ್ತಾವರ ಭರತ್ ವಂದಿಸಿದರು. ಕನ್ನಡ ಭವನ ಪ್ರಕಾಶನ ಮುಖ್ಯಸ್ತೆ, ನಿವ್ರಿತ್ತ ಶಿಕ್ಷಕಿ ಸಂದ್ಯಾ ರಾಣಿ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು.

ಅತ್ತಾವರ ಶಿವರಾಯರು

LEAVE A REPLY

Please enter your comment!
Please enter your name here