ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ “ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ವ್ಯಕ್ತಿ ಚಿತ್ರಣ ಕೃತಿ ಲೋಕಾರ್ಪಣೆ

0
27

ಕಾಸರಗೋಡು : ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ವಾಮನ್ ರಾವ್ ಬೇಕಲ್ “ಎಂಬ ಕೃತಿ ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಎಚ್ ಆರ್ ಶಶಿಧರ್ ನಾಯ್ಕ್ ರೀಗೆ ವಿ. ರಾ. ಮಹಾಸಂಘ ಉಪಾಧ್ಯಕ್ಷರೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರೂ ಆದ ಡಾ. ವಾಮನ್ ರಾವ್ ಬೇಕಲ್ ನೀಡಿ ಶಶಿಧರ್ ನಾಯ್ಕ್ ಲೋಕಾರ್ಪಣೆ ಮಾಡಿದರು. ಈ ಕೃತಿಯನ್ನು ಡಾ. ಮೊಗಸಾಲೆಯವರ ಕಾಂತಾವರ ಕನ್ನಡ ಸಂಘವು “ನಾಡಿಗೆ ನಮಸ್ಕಾರ “ಎಂಬ ಪುಸ್ತಕ ಮಾಲೆಯಲ್ಲಿ ಸಾಹಿತಿ ವಿರಾಜ್ ಅಡೂರ್ ರಚಿಸಿದ ಕೃತಿ. “ವ್ಯಕ್ತಿಯ ಸಾಧನೆಯು ಪುಸ್ತಕ ರೂಪದಲ್ಲಿ ಧಾಖಲಾದಾಗ ಸಾಧನೆಯು ಅನಶ್ವರವಾಗಿ ಉಳಿಯುತ್ತೆ, ಅದು ಓದಿದವರೇಗೆ ಪ್ರೇರಣೆಯಾಗುತ್ತದೆ. ಎಂದು ಕೃತಿ ಲೋಕಾರ್ಪಣೆ ಗೊಳಿಸಿ ಶಶಿಧರ್ ನಾಯ್ಕ್ ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ರಾಮಕ್ಷತ್ರಿಯ ಮಹಾಸಂಘ ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರ್ವೆಗಾರ್ ಹೆಬ್ರಿ, ಉಪಾಧ್ಯಕ್ಷರಾದ ನಾಗರಾಜ್ ಕಾಮಧೇನು, ಪ್ರದಾನ ಕಾರ್ಯದರ್ಶಿ ಅಡ್ವೋ. ಶ್ರೀಧರ್ ಪಿ. ಎಸ್., ಕಾರ್ಯದರ್ಶಿ ರಶ್ಮಿರಾಜ್, ಷಣ್ಮುಖ ಬಿ. ಆರ್, ಡಿ. ಸತೀಶ್, ಗಣಪತಿ ಹೋಬಳಿದಾರ್, ಕೋಶಾಧಿಕಾರಿ ಯು. ಕರುಣಾಕರ, ಪದಾಧಿಕಾರಿಗಳಾದ ಮಂಜುನಾಥ್ ಏನ್, ಅನಿಲ್ ಕುಮಾರ್, ಪದ್ಮನಾಭ ಕೊತ್ವಲ್, ಗಣಪತಿ ಏನ್ ಶೇರುಗಾರ, ಹೂವಯ್ಯ ಶೇರುಗಾರ, ಜಿ. ಆರ್. ಪ್ರಕಾಶ್, ಎಚ್ ಶ್ರೀನಿವಾಸ, ಅಶೋಕ್ ಬೆಟ್ಟಿನ್, ಡಾ. ರಾಜೇಂದ್ರ, ಶಂಕರ್ ಕುಂದಾಪುರ, ಸಂತೋಷ್ ಬಲ್ಕೂರು, ಜೆ. ಸಂತೋಷ್, ನಾಗರಾಜ್ ಮದ್ದೋಡಿ, ನಾಗೇಶ್ ಕೆ. ಜೆ. ಸತೀಶ್ ಕಾವೇರಿ ಬಿ. ನಾಗರಾಜ್ ನಾಯ್ಕ್ , ಸುಮಿತ್ರಾ, ಭಾಗವಹಿಸಿದರು. ಅಡ್ವೋ. ಶ್ರೀಧರ್ ಪಿ. ಎಸ್ ಸ್ವಾಗತಿಸಿ, ರಶ್ಮಿ ರಾಜ್ ನಿರೂಪಿಸಿ ಶ್ರೀನಿವಾಸ್ ಹೆಬ್ರಿ ವಂದಿಸಿದರು.

LEAVE A REPLY

Please enter your comment!
Please enter your name here