ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ 36 ವರ್ಷಗಳಿಂದ ನಿರಂತರವಾಗ ಕಠಿಣ ಪರಿಶ್ರಮದಿಂದ ಕನ್ನಡ ಭಾಷೆಯನ್ನು ವೈಭವೀಕರಿಸಿದೆ. ಕರ್ನಾಟಕದ ಹೃದಯ ಭಾಗದ ದಾವಣಗರೆಯಲ್ಲಿ ಹುಟ್ಟಿ ಬೆಳೆದಿದ್ದು ಪುಣ್ಯವಂತರು. ಕನ್ನಡ ಭಾಷೆಯು ಕರ್ನಾಟಕ ರಾಜ್ಯೋತ್ಸವ ನವಂಬರ್ಗೆ ಸೀಮಿತವಲ್ಲ, ಹಿರಿಯ ಕವಿ, ಸಾಹಿತಿ, ನಿಸಾರ್ ಅಹಮದ್ ಹೇಳಿದಂತೆ ನಿತ್ಯೋತ್ಸವ ಆಗಲಿ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಎಲ್. ರಾಯ್ಕರ್ ಕಲಾಕುಂಚ ಕಛೇರಿ ಹೊರಾಂಗಣದಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಲಾಕುಂಚ ಗೌರವ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್, ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ದಂಪತಿಗಳು. ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಕೆ.ಬಿ.ಬಡಾವಣೆ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ, ಕಲಾಕುಂಚದ ಸಮಿತಿ ಸದಸ್ಯರಾದ ಚನ್ನಬಸಪ್ಪ ಶೀಲವಂತ್, ಪ್ರೇಮಾ ಮಹೇಶ್ವರಯ್ಯ ದಂಪತಿಗಳು, ಎಂ.ಎಸ್.ಪ್ರಸಾದ್, ವಿಜಯಕುಮಾರ್ ಶೆಟ್ಟಿ, ಮುಕ್ತಾ ಶ್ರೀನಿವಾಸಪ್ರಭು, ಸವಿತಾ ವಿಜಯ ಕೂಲಂಬಿ, ಭಾಗ್ಯ ಪಿಸಾಳೆ, ಕೋಮಲ ವಸಂತಕುಮಾರ್, ಭಾರತಿ ರಾಮನಾಥ್ ಖಮಿತ್ಕರ್, ಕೃಷ್ಣಾಶ್ರೀನಿವಾಸ ಪ್ರಭು, ವಿಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.
ಕಲಾಕುಂಚದ ಮುತ್ತೆöÊದೆಯರು ಕನ್ನಡ ತಾಯಿ ಭುವನೇಶ್ವರಿಯ ಕನ್ನಡ ಹಾಡುಗಳನ್ನು ವ್ಯಕ್ತಪಡಿಸಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕಲಾಕುಂಚದ ಪ್ರಧಾನ ಕಾರ್ಯದರ್ಶಿಯಾದ ಕೆ.ಸಿ.ಉಮೇಶ್ ಪ್ರಾರಂಭದಲ್ಲಿ ಸ್ವಾಗತ ಮಾಡಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು.

