ಗಾಯನಕ್ಕೆ ಜೀವಂತಿಕೆ ತುಂಬುವ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ : ಉಪನ್ಯಾಸಕಿ ಗಾರ್ಗಿ ಶಬರಾಯ

0
6

ಕಡಬ : ಶ್ರುತಿ ಮತ್ತು ತಾಳ ಗಾಯನಕ್ಕೆ ಉಸಿರು ಇದ್ದಂತೆ. ಹಾಡುಗಳನ್ನು ದುಃಖ ಸಂತೋಷಗಳೆರಡರಲ್ಲೂ ಆಲಿಸುವ ಮತ್ತು ಆರಾಧಿಸುವ ಜೊತೆಗೆ ಗಾಯನಕ್ಕೆ ಜೀವಂತಿಕೆ ತುಂಬುವ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ. ಕೇಳುಗರ ಭಾವನೆಗಳಿಗೆ ಹತ್ತಿರವಿರುವ ಸಾಹಿತ್ಯ ಹಾಡಿನ ರೂಪದಲ್ಲಿ ಬೆಳಕು ಚೆಲ್ಲುತ್ತದೆ ಎಂದು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಆಯೋಜಿಸಿದ ಗಾನ ಸೌರಭ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಖ್ಯಾತ ಗಾಯಕಿ ಹಾಗೂ ಪೂರ್ಣ ಪ್ರಜ್ಞಾ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಗಾರ್ಗಿ ಶಬರಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಾಸ ಸಾಹಿತ್ಯ, ವಚನ ಸಾಹಿತ್ಯ ಕನ್ನಡ ಗಾಯನ ಲೋಕಕ್ಕೆ ಮೆರುಗು ತಂದಿದ್ದು, ಪುರಂದರ ದಾಸರು ರಚಿಸಿದ ಸಾಕಷ್ಟು ಹಾಡುಗಳು ಇಂದಿಗೂ ಪ್ರಸಿದ್ಧಿಯನ್ನು ಪಡೆದುದ್ದಲ್ಲದೇ, ಪದವಿ ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿಯನ್ನು ಬೆಳಸಿಕೊಂಡು ಭಾಷೆಯ ನಂಟನ್ನು ಕಳೆದುಕೊಳ್ಳಬಾರದೆಂದು ಕರೆ ನೀಡಿದರು.‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಧಿಕಾರಿಗಳಾದ ಅಡ್ವಕೇಟ್ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿ ಸಮಯದ ಬಳಕೆಯನ್ನು ಕಳೆದುಕೊಂಡರೆ ಮತ್ತೆ ಬರುವುದಿಲ್ಲ.ಸಮಯದ ಸದುಪಯೋಗವನ್ನು ನಮ್ಮ ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವ ಅತಿಥಿಗಳ ಜೀವಮಾನದ ಸಾಧನೆಯನ್ನು ನೋಡಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆಯೆಂದು ಹೇಳಿದ್ದಲ್ಲದೇ, ಕ್ರೀಡೆಯಲ್ಲಿರುವ ಹುರುಪು ಸಾಹಿತ್ಯದ ಮೇಲೆ ಕೂಡ ಇರಲಿ ಎಂದು ಆಶಿಸಿದರು.
ಕನ್ನಡ ವಿಭಾಗ ಮುಖ್ಯಸ್ಥರಾದ ಗಿರೀಶ್ ಭಟ್. ಕೆ ಪ್ರಾಸ್ತವಿಕ ಮಾತನಾಡಿ ಶೈಕ್ಷಣಿಕ ಚಟುವಟಿಕೆಗಳ ರೂಪುರೇಷೆಯನ್ನು ತಿಳಿಸಿ ಗೀತೆ ರಚನೆಕಾರರ ಕೊಡುಗೆ ಜೇನು ದುಂಬಿಗಳು ಮಕರಂದವನ್ನು ಹೀರಿ ಪ್ರಕೃತಿಗೆ ಕೊಟ್ಟಂತೆ ಇಂದು ಬರಹಗಾರರು ಸಾಹಿತ್ಯ ಲೋಕಕ್ಕೆ ಧಾರೆಯೆರೆದರೆಂದು ಗಾಯನ ಲೋಕದ ಕೊಡುಗೆಯನ್ನು ಸ್ಮರಿಸಿದರು.

ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ರಶ್ಮಿ ಎ.ಶೆಟ್ಟಿ ಹಾಗೂ ಉಪ ಪ್ರಾಂಶುಪಾಲೆ ಹಾಗೂ ಆಂಗ್ಲ ವಿಭಾಗದ ಮುಖ್ಯಸ್ಥೆ ರಂಜಿತಾ ಬಿ.ಆರ್ , ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಹಾಗೂ ಐಕ್ಯೂಎಸಿ ಸಂಯೋಜಕಿಯಾದ ಕೌಶಲ್ಯ ಆರ್ ಉಪಸ್ಥಿತರಿದ್ದರು.

ಪ್ರಥಮ ಬಿ.ಕಾಂ ವಿದ್ಯಾರ್ಥಿನಿಯರಾದ ಕುಮಾರಿ. ಜಯಶ್ರೀ ಮತ್ತು ತಂಡ ಪ್ರಾರ್ಥನೆಗೈದು, ದ್ವಿತೀಯ ಬಿ.ಎ ವಿದ್ಯಾರ್ಥಿನಿ ಕುಮಾರಿ ಸುಹಾಸಿನಿ ಅತಿಥಿ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ಪುಣ್ಯ ವಂದನಾರ್ಪಣೆ ಮಾಡಿ, ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಕುಮಾರಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.