ಗಾಂಧಿನಗರ: ಎಲ್ಲಾ ಕಡೆಯು ಕನ್ನಡ ಕಡಿತಗೊಳ್ಳುತ್ತಿದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ ಸೀಮಿತವಾಗುತ್ತಿದೆ ಎಂದು ಲೇಖಕಿ, ಉಪನ್ಯಾಸಕರು ಆಗಿರುವಂತಹ ಶ್ರೀಮತಿ. ಶ್ರೀ ಮುದ್ರಾಡಿಯವರು ಹೇಳಿದರು.
ಶ್ರೀ ಗೋಕರ್ಣನಾಥೇಶ್ವರ ಮಹಾವಿದ್ಯಾಲಯ ಗಾಂಧಿನಗರ ಇಲ್ಲಿ ನಡೆದ ಕನ್ನಡ ಸಂಘ 2024-2025ರ ಉದ್ಘಾಟನ ಕಾರ್ಯಕ್ರಮದ ವೇಳೆಯಲ್ಲಿ ಮುಖ್ಯ ಸಂಪನ್ಮೂಲ ಗಣ್ಯರಾಗಿ ಬಂದಂತಹ ಶ್ರೀಮತಿ ಶ್ರೀ ಮುದ್ರಾಡಿ ನಿಟ್ಟೆ ಪದವಿ ಪೂರ್ವ ಕಾಲೇಜು ಇವರು ಪ್ರಶಿಕ್ಷಣಾರ್ಥಿಗಳು ಎಂದಿಗೂ ತಪ್ಪು ಮಾಡಬಾರದು ಭವಿಷ್ಯದಲ್ಲಿ ಶಿಕ್ಷಕರಾಗುವವರು ಹಾಗೂ ತನ್ನ ಬದುಕಿನ ಸಾರವನ್ನು ತಿಳಿಸುತ ಕನ್ನಡ ಭಾಷೆಯ ಮಹತ್ವ,ಹಿರಿಮೆಯ ಕುರಿತು ಉಪನ್ಯಾಸವನ್ನು ನೀಡಿದರು.
ಇನ್ನೊರ್ವ ಅತಿಥಿಯಾಗಿ ಶ್ರೀ ಗೋಕರ್ಣನಾಥ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಶ್ರೀ ವಸಂತ್ ರವರು ಕನ್ನಡದ ಉಲ್ಲೇಖಗಳು ಮತ್ತು ಕವಿರಾಜಮಾರ್ಗದಲ್ಲಿ ಕನ್ನಡದ ಕುರಿತ ಅಂಶಗಳ ಕುರಿತು ಹೇಳುತಾ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು. ಕನ್ನಡ ಸಂಘದ ಸಂಚಾಲಕರು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಶ್ರೀಮತಿ ಸುಚಿತ್ರ ಶೆಟ್ಟಿ ಇವರು ಕನ್ನಡದ ಬಗೆಗೆ ನಲ್ಮೆಯ ಮಾತುಗಳನ್ನು ಆಡಿದರು.ನಂತರ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ತಮ್ಮ ಅಧ್ಯಾಕ್ಷಿಯ ನುಡಿಗಳನ್ನು ಆಡಿದರು.
ಸಂಪನ್ಮೂಲ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ವಿಭಾಗದ ಬೋಧಕ ವೃಂದ ಹಾಗೂ ಬೋಧಕೇತರ ವೃಂದ, ಪ್ರಶಿಕ್ಷಣಾರ್ಥಿಗಳು ಭಾಗಿಯಾಗಿದ್ದರು.
ಕನ್ನಡ ವಿದ್ಯಾರ್ಥಿನಿ ಅಮೃತ ವರ್ಷಿಣಿ ನಿರೂಪಿಸಿದರು,ಕನ್ನಡ ಸಂಘದ ಕಾರ್ಯದರ್ಶಿ ಕನಕಪ್ಪ ವಂದಿಸಿದರು. ಶ್ರೀ ಮುದ್ರಾಡಿಯವರ ಹೊಸ ಸಾಹಿತ್ಯಕ್ಕೆ ರಾಗ ಸಂಯೋಜಿಸಿ ಶಬರಿಶ್ ಆಚಾರ್ಯ ತಂಡ ಹಾಡಿದರು.

