ಐವತ್ತರ ಸಂಭ್ರಮದಲ್ಲಿ ಕಾಂತಾವರ ಕನ್ನಡ ಸಂಘ

0
65

ವರದಿ ರಾಯಿ ರಾಜ ಕುಮಾರ
ಕಾಂತಾವರ ಕನ್ನಡ ಸಂಘವು 50 ವರ್ಷಗಳಲ್ಲಿ ಮರೆಯಲಾಗದ ಹೆಜ್ಜೆಗುರುತುಗಳನ್ನು ದಾಖಲಿಸಿದೆ. ಮುಂದೆ ಇದನ್ನೆಲ್ಲ ಉಳಿಸಿ ಬೆಳೆಸುವ ಜವಾಬ್ದಾರಿ ಇದೆ. ಎಂದು ಕಾರ್ಕಳದ ಹಿರಿಯ ಚಾರ್ಟರ್ಡ್ ಎಕೌಂಟೆಂಟ್ ಕಮಲಾಕ್ಷ ಕಾಮತ್ 50ರ ಸಂಭ್ರಮದ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಸಂಸ್ಕೃತಿ ವಿಶ್ವಪ್ರತಿಷ್ಠಾನದ ಅಧ್ಯಕ್ಷ ಯು.ವಿಶ್ವನಾಥ ಶೆಣೈ ‘ನಾಡಿಗೆ ನಮಸ್ಕಾರ’ ಗ್ರಂಥಮಾಲಿಕೆಯ ನೂತನ ಹತ್ತು ಕೃತಿಗಳನ್ನು ಬಿಡುಗಡೆಗೊಳಿಸಿದರು.
ಗೌರವ ಕಾರ್ಯಾಧ್ಯಕ್ಷ ಮೂಡುಬಿದಿರೆಯ ಕೆ. ಶ್ರೀಪತಿ ಭಟ್ ಅವರು ಆನೆ ಕಾಲಿಗೆ ಅಂಕುಶ’- ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ.ನರಹರಿ ಮತ್ತು ಐಎಡಿ’ ಕೃತಿಯನ್ನು ಬಿಡುಗಡೆಗೊಳಿಸಿದರು. ಗ್ರಂಥಮಾಲೆಯ ಸಂಪಾದಕ ಡಾ. ಬಿ ಜನಾರ್ದನ ಭಟ್ ಮಾಲೆಯ ಪರಿಚಯಗೈದರು.
ಮುಖ್ಯ ಅತಿಥಿ, ನಿವೃತ್ತ ಪ್ರಾಧ್ಯಾಪಿಕೆ ಡಾ| ಯು. ಮಹೇಶ್ವರಿ ಅವರು ಮಾತನಾಡಿದರು. ಸತೀಶ್ ಕುಮಾರ್ ಕೆಮ್ಮಣ್ಣು ಅವರು ಕನ್ನಡ ಧ್ವಜಾರೋಹಣಗೈದರು. ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಿರೂಪಿಸಿದರು. ಸುಮನಾ  ವಂದಿಸಿದರು.

LEAVE A REPLY

Please enter your comment!
Please enter your name here