ಕಾಂತಾವರ : ಎ.22 ರಿಂದ ಶ್ರೀ ಕ್ಷೇತ್ರ ಕೇಪ್ಲಾಜೆ ಬ್ರಹ್ಮಕಲಶ ವರ್ಧಂತಿ ಉತ್ಸವ ಹಾಗೂ ಪಗ್ಗು ಮಾರಿಪೂಜೆ

0
311

ಕಾಂತಾವರ : ಎ.22 ರಿಂದ ಶ್ರೀ ಕ್ಷೇತ್ರ ಕೇಪ್ಲಾಜೆ ಮಹಾಮ್ಮಾಯಿ ದೇವಿಗುಡಿಯಲ್ಲಿ ಬ್ರಹ್ಮಕಲಶ ವರ್ಧಂತಿ ಉತ್ಸವ ಹಾಗೂ ಪಗ್ಗು ಮಾರಿಪೂಜೆಯು ಜರಗಲಿರುವುದು.

ಎ‌.22 ರಂದು ದೇವತಾ ಪ್ರಾರ್ಥನೆಯೊಂದಿಗೆ ಪೂಣ್ಯಾಹ, ನವಕ ಪ್ರಧಾನ ಹೋಮ, ಗುಳಿಗ ದೈವದ ಪ್ರತಿಷ್ಠೆ, ಕಲಾಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ ಗಂಟೆ 7.ಕ್ಕೆ ಶ್ರೀ ದೇವರ ಕಟ್ಟೆಯಲ್ಲಿ ‌ಶ್ರೀ ದೇವಿಯ ಬಿಂಬ ಪ್ರತಿಷ್ಠೆಗೊಂಡು ದೇವಿ ದರ್ಶನದೊಂದಿಗೆ ಶ್ರೀ ಕ್ಷೇತ್ರಕ್ಕೆ ದೇವಿಯ ಬಿಂಬ ಬಿಂಬ ಅಗಮನ. ಪ್ರತಿಷ್ಠಾಪನೆ ಪೂಜೆಯ ನಂತರ ದರ್ಶನ ಸೇವೆ ನಡೆಯಲಿದೆ. ನಂತರ ಧರ್ಮದೈವ ಅಣ್ಣಪ್ಪ ಸ್ವಾಮಿಯ ನೇಮೋತ್ಸವ ಜರಗಲಿದೆ.

ಎ.23 ರಂದು‌ ಪ್ರಾತ ಕಾಲ ಅರಮನೆ ಪೂಜೆ ಗುಳಿಗ ದೈವದ ನೇಮೋತ್ಸವ ಹಾಗೂ ಸಾಯಂಕಾಲ 4.30 ರಿಂದ ಶ್ರೀದೇವಿಗೆ ಮಹಾಪೂಜೆ ಮಂಗಳಾರತಿ ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here