ಮೂಡುಬಿದಿರೆ : ತಾಲೂಕಿನ ತೋಡಾರ್ ಗ್ರಾಮದ ಕಾಪಿಕಾಡು ಶ್ರೀ ಬ್ರಹ್ಮಶ್ರೀ ಭಜನಾ ಮಂಡಳಿ ಇದರ ವತಿಯಿಂದ ಕಾಪಿಕಾಡ್ ದೈವಸ್ಥಾನದಲ್ಲಿ ದೀಪಾವಳಿ ಉತ್ಸವ ಮತ್ತು ಸಾಮೂಹಿಕ ಗೋಪೂಜೆಯು ಭಜನಾ ಮಂಡಳಿಯ ಮಕ್ಕಳು ಮತ್ತು ಪೋಷಕರ ಸಹಕಾರದಿಂದ ಅದ್ದೂರಿಯಾಗಿ ನಡೆಯಿತು.
ದೈವಸ್ಥಾನದ ಗುರಿಕಾರ ಶ್ರೀ ಗಂಗಾಧರ ಇವರಿಂದ ದೀಪ ಬೆಳಗಿಸುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಹಿಳೆಯರು ಮತ್ತು ಮಕ್ಕಳಿಂದ ಧಾರ್ಮಿಕ ವಿಧಿ ವಿಧಾನದೊಂದಿಗೆ ಗೋಪೂಜೆಯನ್ನು ನೆರವೇರಿಸಿದರು. ಭಜನಾ ತಂಡದ ಗುರುಗಳಾದ ಪ್ರವೀಣ್. ಆರ್. ಕೋಟ್ಯಾನ್ ಭಾಗವಹಿಸಿ ದೀಪಾವಳಿ ಉತ್ಸವ ಮತ್ತು ಗೋಪೂಜೆಯ ಮಹತ್ವವನ್ನು ತಿಳಿಸಿದರು.
ನಂತರ ಮಹಿಳಾ ಸಮಿತಿ ಅಧ್ಯಕ್ಷರಾದ ಗುಲಾಬಿ ಇವರು ಸಾಮೂಹಿಕ ದೀಪೋತ್ಸವಕ್ಕೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮಕ್ಕಳೊಂದಿಗೆ ಮಣ್ಣಿನ ಹಣತೆಯನ್ನು ಬೆಳಗಿಸುವ ಮೂಲಕ ದೀಪಾವಳಿ ಉತ್ಸವ ವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರಮುಖರಾದ ಕೊರಗಜ್ಜ ಸ್ಥಾನದ ಸೇವಕರಾದ ರಮೇಶ್, ಪೂವಪ್ಪ, ಸುರೇಂದ್ರ ಮಹಿಳಾ ಸಮಿತಿಯ ಜಯಲಕ್ಷ್ಮಿ, ಮೀನಾಕ್ಷಿ, ವಿನೋದ, ಪ್ರಭಾವತಿ, ಭಾರತಿ, ಭವ್ಯ,ಭವಾನಿ, ಪ್ರನೀತಾ, ಬೇಬಿ,ಲೀಲಾವತಿ, ಪ್ರಮೀಳಾ,ನೇತ್ರಾ, ಸಂಗೀತ, ಸುಮತಿ ಮುಂತಾದವರು ಭಾಗವಹಿಸಿದ್ದರು..
*ಕಾಪಿಕಾಡು ಊರಿನ ಹಳ್ಳಿ ನಾಡಿನಲ್ಲಿ ತೋಡಾರ್ ಗ್ರಾಮದಲ್ಲೇ ಪ್ರಪ್ರಥಮ ಕುಣಿತ ಭಜನಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಬ್ರಹ್ಮಶ್ರಿ ಭಜನಾ ಮಂಡಳಿಯು ಈ ವರ್ಷ ಲೋಕಾರ್ಪಣೆಗೊಂಡು ಕಳೆದ 7ತಿಂಗಳುಗಳಿಂದ ದೈವಸ್ಥಾನದಲ್ಲಿ ಪ್ರತಿ ತಿಂಗಳು ಸಂಕ್ರಮಣದಂದು ಭಜನಾ ಸೇವೆ, ವಿವಿಧ ಧಾರ್ಮಿಕ ಕ್ಷೇತ್ರದಲ್ಲಿ ಭಜನಾ ಸೇವೆ, ದೇವರ ವಿಸರ್ಜನಾ ಮೆರವಣಿಗೆಯಲ್ಲಿ ಭಜನಾ ಸೇವೆಯಲ್ಲಿ ತೊಡಗಿಕೊಂಡು ಮಕ್ಕಳು ಧಾರ್ಮಿಕ ಸೇವೆಯತ್ತ ಮನೋಭಾವನೆ ಬೆಳೆಸಿಕೊಂಡಿದ್ದಾರೆ.

ಇದರ ಹಿಂದೆ ಎಳೆಮರಿಕಾಯಿಯಂತೆ ತನ್ನೂರಿನ ಭಜನಾ ಮಂಡಳಿಯ ಮಕ್ಕಳಿಗೆ ಸಹಕಾರ ನೀಡಿರುವ ಉದ್ಯಮಿಗಳಾದ ಅರುಣ್. ರೈಯವರ ದಾನವು ಪ್ರೋತ್ಸಾಹದ ರೂಪದಲ್ಲಿ ವಸ್ತ್ರ ಶಲ್ಯ ತಾಳದ ಹೆಜ್ಜೆ ಬೇರೆ ಬೇರೆ ಊರಿಗೆ ಪಸರಿಸಲು ಆರಂಭಿಸಿದ ಅರುಣ್. ರೈ ಇವರಿಗೆ ಭಜನಾ ಸಮಿತಿಯ ಪರವಾಗಿ ಅನಂತಾನಂತ ಧನ್ಯವಾದಗಳು ಎಂದು ತಿಳಿಸಲಾಯಿತು.
ವರದಿ : ಪ್ರವೀಣ್. ಆರ್. ಕೋಟ್ಯಾನ್

