ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಡಾ. ಸುರೇಶ್ ರೈ ಕೆ. ನೇಮಕ

0
5

ಕಾಪು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಪುವಿನ ಗ್ರೇಡ್-1 ಪ್ರಾಂಶುಪಾಲರಾಗಿ ಡಾ. ಸುರೇಶ್ ರೈ ಕೆ. ಅವರು ನೇಮಕಗೊಂಡು ಅಧಿಕಾರದ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.

ಶಿಕ್ಷಣ ಇಲಾಖೆಯ ಗ್ರೇಡ್-1 ಪ್ರಾಂಶುಪಾಲರ ನೇಮಕಾತಿ ಆದೇಶದಂತೆ ಈ ನೇಮಕಾತಿ ನಡೆದಿದ್ದು, ಕಾಲೇಜಿನ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಡಾ. ಸುರೇಶ್ ರೈ ಅವರು ಈ ಹಿಂದೆ 2022ರಿಂದ 2024ರವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2024ರಿಂದ 2026ರವರೆಗೆ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.

ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಅನುಭವ ಹೊಂದಿರುವ ಡಾ. ಸುರೇಶ್ ರೈ ಕೆ. ಅವರ ನೇಮಕಾತಿಯಿಂದ ಕಾಪು ಕಾಲೇಜಿನ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ದೊರೆಯುವ ನಿರೀಕ್ಷೆಯಿದೆ.