ಉಡುಪಿ : ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಫೋಸ್ಟ್ ನ್ನು ಹಾಕಿದ ಬಿಂದು ಸಿರ ಎಂಬ ಮಹಿಳೆ ವಿರುದ್ಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತೆ, ಕಾರ್ಕಳದ ರಮಿತಾ ಸೂರ್ಯವಂಶಿ ಈ ದೂರು ದಾಖಲಿಸಿದ್ದಾರೆ. ಬಿಂದು ಸಿರ ಎಂದು ಹೇಳುವ ಮಹಿಳೆ ಕರ್ನಾಟಕ ಕಾಂಗ್ರೆಸ್ ನ ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡಿದ್ದು ತನ್ನ ಸಾಮಾಜಿಕ ಜಾಲತಾಣದಲ್ಲಿ ಭಾರತ ದೇಶದ ಪ್ರಧಾನಿಗೆ ಅವಮಾನವಾಗುವ ಪೋಸ್ಟ್ ಅನ್ನು ಹರಿಬಿಟ್ಟಿರುತ್ತಾರೆ.
ಭಾರತದ ಪ್ರಜೆಯಾಗಿ ದೇಶದ ಪ್ರಧಾನಿಗೆ ಗೌರವ ಕೊಡುವಂಥದ್ದು ಭಾರತೀಯರ ಕರ್ತವ್ಯ. ಹಾಗಾಗಿ ಬಿಂದು ಸಿರ ಅವರ ಪೋಸ್ಟ್ ತೀವ್ರ ಚರ್ಚೆಗೆ ಆಸ್ಪದವಾಗಿದ್ದು ಪ್ರಧಾನಿಗೆ ಅವಮಾನ ಮಾಡುವ ಇವರ ಮೇಲೆ ಕ್ರಮ ತೆಗೆದು ಕೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ವರದಿ ವಿನೋದ್ ಶೆಟ್ಟಿ

