ಕಾರ್ಕಳ : ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ

0
80

ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜೆಕಾರು ಮರ್ಜಿ ಗ್ರಾಮದಲ್ಲಿ ನಡೆದಿದೆ.

ದೇವರಾಯ ಹೆಗ್ಡೆ (80) ನೇಣಿಗೆ ಶರಣಾದ ವ್ಯಕ್ತಿ . ಅವರ ಹೆಂಡತಿ ಒಂದು ವರ್ಷದ ಹಿಂದೆ ನಿಧನರಾಗಿದ್ದು , ಆ ಬಳಿಕ ದೇವರಾಯ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು , ಬೆಳಗ್ಗೆ ಸೊಸೆ ಮನೆಯ ಹಿಂಬಾಗಿಲು ತೆರೆದು ಹೊರಗೆ ಹೋದಾಗ ಮನೆಯ ಹಿಂಬದಿಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ದೇವರಾಯ ಹೆಗ್ಡೆ ಅವರು ಮಾನಸಿಕ ಖಿನ್ನತೆಯಿಂದ , ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ದಾಮೋದರ ಹೆಗ್ಡೆ ನೀಡಿದ ಮಾಹಿತಿಯಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here