ಕಾಂತಾವರ: ಹಟ್ಟಿಯಲ್ಲಿ ಅಗ್ನಿ‌ ಅವಘಡ, ಎರಡು ಕಂಬಳದ ಕೋಣಗಳು ಸುಟ್ಟು ಕರಕಲು

0
1695

ಕಾರ್ಕಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಟ್ಟಿಗೆ ಬೆಂಕಿ‌ ತಗುಲಿ ಎರಡು ಕಂಬಳದ ಕೋಣಗಳು ಸುಟ್ಟುಕರಕಲಾದ ಘಟನೆ ಕಾರ್ಕಳ ತಾಲೂಕಿನ ಕಾಂತಾವರ ಬೇಲಾಡಿ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಉಂಟಾಗಿದ್ದು, ಬೆಂಕಿಯ ಕೆನ್ನಾಲೆಗೆ ಸಂಪೂರ್ಣ ಹಟ್ಟಿಗೆ ವ್ಯಾಪಿಸಿದೆ. ಇದರಿಂದ ಅಪ್ಪು ಮತ್ತು ತೋನ್ಸೆ ಹೆಸರಿನ ಎರಡು ಕಂಬಳ ಕೋಣಗಳು ಬೆಂಕಿಗಾಹುತಿಯಾಗಿವೆ.

LEAVE A REPLY

Please enter your comment!
Please enter your name here