Saturday, June 14, 2025
Homeಪುತ್ತೂರುಮಾತೃಶ್ರೀ ಕ್ರಿಯೇಷನ್ ಅರ್ಪಿಸುವ ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್ ಬಿಡುಗಡೆ

ಮಾತೃಶ್ರೀ ಕ್ರಿಯೇಷನ್ ಅರ್ಪಿಸುವ ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್ ಬಿಡುಗಡೆ


ಪುತ್ತೂರು : ಮಾತೃಶ್ರೀ ಕ್ರಿಯೇಷನ್ ಅರ್ಪಿಸುವ ಪುತ್ತೂರಿನ ಮುತ್ತು, ಲವ್ ಟು ಲಸ್ಸಿ ಸಿನಿಮಾದ ನಾಯಕ ನಟ ಆರ್ಯನ್ ಇವರ ಸಹಕಾರದಲ್ಲಿ ಅಶ್ವಥ್ ಎನ್ ಪುತ್ತೂರು ಇವರ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಮೂಡಿಬಂದ ವಿಭಿನ್ನ ಕಥಾಧರಿತವಾದ “ಅಸ್ಮಿತ” ಕಿರುಚಿತ್ರದ ಪೋಸ್ಟರನ್ನು ಅಭಿನಯ ಆರ್ಟ್ಸ್ ತಂಡದ ನಿರ್ದೇಶಕರಾದ ಜಿಲ್ಲಾ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾಚತುರ ಕೇಶವ ಮಚ್ಚಿಮಲೆ ಬಿಡುಗಡೆ ಮಾಡಿದ್ದು, ಇದೀಗ ಸೆಕೆಂಡ್ ಪೋಸ್ಟರನ್ನು ಪ್ರತಾಪ್ ಪೆರಿಯಾಕ್ಕ ಇವರು ಬಿಡುಗಡೆ ಮಾಡಿದ್ದಾರೆ. ಬಳಿಕ ತೆಂನ್ಕಾಯಿ ಮಲೆ ಖ್ಯಾತಿಯ ರವಿಚಂದ್ರ ರೈ ಮುಂಡೂರು ಇವರು ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಹಾರೈಸಿದ್ದಾರೆ.


ಅನರಕಲಿ ತುಳು ಸಿನಿಮಾದ ಸಹ ನಿರ್ದೇಶಕರಾದ ಪವಿತ್ರ ಪ್ರಭು ;ಅಸ್ಮಿತʼ ಚಿತ್ರತಂಡಕ್ಕೆ ಶುಭಾಹಾರೈಸಿದ್ದಾರೆ.
“ಅಸ್ಮಿತ” ಕಿರುಚಿತ್ರ ಟ್ರೈಲರ್ ಮೂಲಕ ವಿಭಿನ್ನತೆಯನ್ನು ತೋರಿಸಿದ್ದು, ಈ ಕಿರುಚಿತ್ರ ಕುತೂಹಲಕಾರಿಯನ್ನು ಮೂಡಿಸಿದೆ. ಧರ್ಮಶ್ರೀ ಧರ್ಮಸ್ಥಳ, ಶ್ರಾವ್ಯ ಪ್ರಭು ಆಜೇರು ಇವರ ಸಹಕಾರದಲ್ಲಿ, ಸೌರಭ್ ಇವರ ಛಾಯಾಗ್ರಹಣದಲ್ಲಿ, ಮಲ್ಲಿಕಾರ್ಜುನ್ ಸುಳ್ಯ ಇವರ ಸಂಗೀತ ಸಾಹಿತ್ಯ ಇರಲಿದ್ದು , ಆಕಾಶ್ ಪಂಜ, ಮತ್ತು ಚಿಂತನ್ ಕೆ. ಸ್ವರ್ಣಡು ರವರ ಸಂಕಲನದಲ್ಲಿ ಪ್ರಸನ್ನ ರೈ ರಿಫ್ಲೆಟ್ಟೆರ್, ಪೋಸ್ಟರ್ ಸಂಯೋಜನೆಯಲ್ಲಿ ಮನೋಜ್ ಧರ್ಮಸ್ಥಳ , ಸೌಮ್ಯ , ಅಜೀತ್ ಕಾವು, ಅಕ್ಷಯ್ ಕೊಲ್ಚಾರ್, ಮಾನ್ಯ ಹಾಸನ್, ಯೋಗೀಶ್ ಕುಂಬ್ರ ನಟಿಸಿದ್ದು, ಅಸ್ಮಿತ ಕಿರುಚಿತ್ರ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕರಾದ ಅಶ್ವಥ್ ಎನ್ ಪುತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular