ಕಾರ್ಕಳ : ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿ ಯಿಂದ ರಾಜ್ಯ ಹೆದ್ದಾರಿ ಯಲ್ಲಿ ವಾಹನ ಸವಾರರ ಪರದಾಟ..!

0
25

ಕಾರ್ಕಳ ಪುರಸಭಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ಕಾರ್ಕಳ ಆನೆಕೆರೆಯಿಂದ ಪುಲ್ಕೇರಿ ಬೈಪಾಸ್ ಗೆ ಹೋಗುವ ರಸ್ತೆ ಶ್ರೀ ಕೃಷ್ಣ ಎನ್ಕ್ಲೆವ್ ಕಟ್ಟಡ ಸಮುಚ್ಛಯದ ಮುಂಭಾಗದಲ್ಲಿ , ಕಳೆದ ಎರಡು ತಿಂಗಳುಗಳಿಂದ ರಸ್ತೆ ಮಧ್ಯದಲ್ಲಿ ಮೋರಿ ಕೆಲಸದಿಂದಾಗಿ, ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿ ವಾಹನ ಚಾಲಕರು ಭಾರೀ ಹಿಂಸೆಯನ್ನು ಅನುಭವಿಸಿದ್ದರು.

ಬಾಣಲೆಯಿಂದ ಬೆಂಕಿಗೆ!?!?

ಇದೀಗ ರಸ್ತೆ ಮಧ್ಯದ ಮೋರಿ ಕಾಮಗಾರಿಯು ಮುಗಿದಿದ್ದು, ಗುತ್ತಿಗೆದಾರರ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇತ್ತೀಚೆಗೆ ಸುರಿದ ಮಳೆಗೆ ರಸ್ತೆಯೆಲ್ಲ ರಾಡಿಯಾಗಿದ್ದು, ರಸ್ತೆ ಮಧ್ಯದಲ್ಲಿ ಮೋರಿ ಕೆಲಸ ಮಾಡಿದ ಸ್ಥಳದಲ್ಲಿ ಸರಿಯಾಗಿ ಡಾಮರೀಕರಣ ಮಾಡದೇ ಇರುವುದರಿಂದ ಕಳಪೆ ಕಾಮಗಾರಿಯಿಂದಾಗಿ, ರಸ್ತೆ ಮಧ್ಯದಲ್ಲಿ ಹೊಂಡ ಬಿದ್ದು ಡಾಮಾರು ಕಿತ್ತು ಹೋಗಿ ಕಾರ್ಕಳ ನಗರಕ್ಕೆ ಪ್ರವೇಶಿಸುವ ಮತ್ತು ಕಾರ್ಕಳ ನಗರದಿಂದ ಬಜಗೋಳಿ, ನಿಟ್ಟೆ ,ಮೂಡಬಿದರೆ ಕಡೆಗೆ ಹೋಗುವ ಬಸ್ಸು ,ಲಾರಿ, ಇತರ ಖಾಸಗಿ ವಾಹನಗಳ ದಟ್ಟಣೆಯಿಂದಾಗಿ ವಾಹನ ಚಾಲಕರು ತೀರಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಈಗಾಗಲೇ ಪರಿಸರದ ನಿವಾಸಿಗಳು ಈ ಬಗ್ಗೆ ಪುರಸಭೆ ಅಧಿಕಾರಿಗಳು ಮತ್ತು ಸ್ಥಳೀಯ ನಿಕಟ ಪೂರ್ವ ಪುರಸಭಾ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಪ್ರತಿಭಟನೆಯ ಎಚ್ಚರಿಕೆ !?!?

ಈಗಾಗಲೇ ಎರಡು ಮೂರು ದಿನ ಸುರಿದ ಮಳೆಗೆ ಪರಿಸರವೆಲ್ಲ ಕೆಸರಿನಿಂದ ರಾಡಿ ಎದ್ದಿದ್ದು, ನಡೆದಾಡುವ ಪ್ರಯಾಣಿಕರು ರಸ್ತೆಯಲ್ಲಿ ಜಾರಿ ಬಿದ್ದು ,ವಾಹನ ಅಪಘಾತಗಳೂ ಸಂಭವಿಸಿದವೆ!?!?

ಮೋರಿ ಕಾಮಗಾರಿ ನಡೆಯುತ್ತಿರುವ ಸುಮಾರು ಎರಡು ತಿಂಗಳುಗಳ ಕಾಲ ವಾಹನ ಸಂಚಾರಕ್ಕೆ ತೊಡಕು ಉಂಟಾಗಿ ಆಗಾಗ ನಿರಂತರ ವಾಹನ ಸಂಚಾರ ಬ್ಲಾಕ್ ಆಗಿ ಪ್ರಯಾಣಿಕರು ಮತ್ತು ಪರಿಸರ ಜನತೆ ಭಾರಿ ತೊಂದರೆಯನ್ನು ಅನುಭವಿಸಿದ್ದರು.

ಕಾಮಗಾರಿ ಮುಗಿದ ಬಳಿಕ ಪರಿಸ್ಥಿತಿ ಸರಿ ಹೋಗಬಹುದು ಎಂದೆಣಿಸಿದರೆ ಇದೀಗ ಕಳಪೆ ಕಾಮಗಾರಿಯಿಂದಾಗಿ ವಾಹನ ಚಾಲಕರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ !?!?

ಇನ್ನೇನು ಒಂದು ವಾರದ ಒಳಗೆ ಮುಂಗಾರು ಮಳೆ ಪ್ರಾರಂಭವಾಗುವ ಮುನ್ಸೂಚನೆ ಇದೆ.

ನಿರಂತರ ಮಳೆ ಸುರಿಯುತ್ತಿದ್ದರೆ, ವಾಹನಗಳ ಸಂಚಾರಕ್ಕೆ ತೀವ್ರ ತೊಡಕುಂಟಾಗಿ ಇನ್ನಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.

ಕೂಡಲೇ ಈ ರಾಜ್ಯ ಹೆದ್ದಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಈ ಅವೈಜ್ಞಾನಿಕ ಕಳಪೆ ಕಾಮಗಾರಿಯನ್ನು ಸರಿಪಡಿಸದಿದ್ದರೆ ಪರಿಸರದ ನಾಗರಿಕರು ಒಟ್ಟಾಗಿ ಭಾರೀ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here