ಉಡುಪಿ ಪ್ರಾಂತ್ಯ ಮಟ್ಟದಲ್ಲಿ ಒಲಿವಿಯಾ ಡಿಮೆಲ್ಲೊ ಸಾರಥ್ಯದ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಕಳ ಘಟಕಕ್ಕೆ ೨೦೨೪-೨೫ನೇ ಸಾಲಿನಲ್ಲಿ ಹಲವು ಪ್ರಶಸ್ತಿಗಳು ಲಭಿಸಿದೆ. ಘಟಕವು ನಡೆಸಿದ ಕಾರ್ಯಕ್ರಮಗಳಿಗೆ ಅತ್ಯುತ್ತಮ ಪ್ರಶಸ್ತಿ, ಅತ್ಯಧಿಕ ಅಜೀವ ಸದಸ್ಯತನಕ್ಕೆ ಹಾಗೂ ಆಮ್ಚೊ ಸಂದೇಶ್ ಪತ್ರಿಕೆಗೆ ಅತ್ಯಧಿಕ ಜಾಹೀರಾತು ಸಂಗ್ರಹಕ್ಕೆ ದ್ವಿತೀಯ ಪ್ರಶಸ್ತಿ, ವಲಯ ಮಟ್ಟದಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಉಡುಪಿಯ ಅನುಗ್ರಹದಲ್ಲಿ ಭಾನುವಾರ ನಡೆದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಹಮಿಲನ ಕಾರ್ಯಕ್ರಮ ನಡೆಯಿತು.
ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕೇಂದ್ರೀಯ ಅಧ್ಯಕ್ಷ ರೋನಾಲ್ಡ್ ಡಿ ಅಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಆಧ್ಯಾತ್ಮಿಕ ನಿರ್ದೇಶಕ ಅತೀ ವಂದನೀಯ ಸ್ವಾಮಿ ಫರ್ಡಿನಾಂಡ್ ಗೊನ್ಸಾಲಿಸ್ ಉದ್ಘಾಟಿಸಿದರು.