ಬೆಂಗಳೂರು : ದಿನಾಂಕ 15.03.2026 ರಂದು ಡಾ. ಬಿಆರ್ ಅಂಬೇಡ್ಕರ್ ಸಭಾಭವನ ಯಲಹಂಕ ಬೆಂಗಳೂರು ನಲ್ಲಿ TV4 ನ್ಯೂಸ್ ಚಾನೆಲ್ ಹಾಗೂ ಶ್ರೀ ಶಿರಡಿ ಸಾಯಿ ದೀಪ ಮೀಡಿಯಾ ಬ್ರಾಡ್ಕಾಸ್ಟಿಂಗ್ ಸರ್ವಿಸ್ (ರಿ) ಶ್ರೀ ಶಿರಡಿ ಸಾಯಿ ದೀಪ ಚಾರಿ ಟ್ರಿಬಲ್ ಟ್ರಸ್ಟ್ (ರಿ) ಸಹಯೋಗದೊಂದಿಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರಶಸ್ತಿ 2026 ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕದ ಮೊದಲ ಮಹಿಳಾ ಅಗೋರಿ ಹಾಗೂ ಆನಂದ ಗುರೂಜಿ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಧ್ರುವಂತ್, ಗೋಲ್ಡ್ ಸುರೇಶ್, ಡಾಗ್ ಸತೀಶ್, ಜಾನ್ವಿ ಗಾಯಕಿ ಅರ್ಚನ ಉಡುಪ, ನಟಿ ವೀಣಾ ಸುಂದರ್ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ.ಯು ರಾಜಾಪುರದ ಡಿಎಸ್ ಗಂಗಣ್ಣ ಲಕ್ಷ್ಮಮ್ಮ ಅವರ ಪುತ್ರನಾದ ಸಕಲಕಲಾವಲ್ಲಭ ಕಲಾವಿದ ಡಿಜಿ ತಿರುಮಲ ಅವರಿಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ನೀಡಿ ಗೌರವಿಸಿದ TV4 ಸುದ್ದಿ ವಾಹಿನಿ ಮಾಲೀಕರಾದ ಸಂಸ್ಥಾಪಕ ಅಧ್ಯಕ್ಷರಾದ.ಡಾ. ಸಾಯಿ ಸತೀಶ್ ತೋಟಯಾ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.

