ಪುಸ್ತಕ ಓದುವವರ ಜ್ಞಾನಶಕ್ತಿ ಹೆಚ್ಚಾಗುತ್ತದೆ – ಬಿ. ವಾಮದೇವಪ್ಪ

0
36

ದಾವಣಗೆರೆ : ಗ್ರಂಥಗಳು, ಪುಸ್ತಕ ಓದುವಂತಹ ಮಾನವನ ಜೀವನಕ್ಕೆ ದಾರಿದೀಪವಾಗುತ್ತದೆ ಜೊತೆಗೆ ಜ್ಞಾಶನಕ್ತಿ ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ಮೊಬೈಲ್‌ಗಳಲ್ಲಿ ಮುಳುಗಿ ತಮ್ಮ ತಮ್ಮ ಪರಿಜ್ಞಾನ ಕಳೆದುಕೊಳ್ಳುತ್ತಾರೆ. ಇಡೀ ಕರ್ನಾಟಕದಲ್ಲಿ ಮಾಡದೇ ಇರುವ ಸ್ವಾತಂತ್ರö್ಯ ಸಂಸ್ಥೆ ದಾವಣಗೆರೆಯ ಕಲಾಕುಂಚ ಕಳೆದ 4 ದಶಕಗಳಿಂದ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಂಸ್ಕೃತಿ, ಯಕ್ಷಗಾನ ಸೇರಿದಂತೆ ನಿರಂತರವಾಗಿ ಕಠಿಣ ಪರಿಶ್ರಮದಿಂದ ಸಾಂಸ್ಕೃತಿಕ ಚಟುವಟಿಕೆಗಳ ಸಾಧನೆ ಶ್ಲಾಘನೀಯ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ ತಮ್ಮ ಅಂತರಾಳದ ಅನಿಸಿಕೆಗಳನ್ನು ಹಂಚಿಕೊಂಡರು.

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಂಯಕ್ತಾಶ್ರಯದಲ್ಲಿ ದಾವಣಗೆರೆಯ ನಲ್ಲೂರು ಲಕ್ಷö್ಮಣ್‌ರಾವ್‌ರವರ “ಆಧ್ಯಾತ್ಮಿಕ ಸುಭಾಷಿತ” ಪುಸ್ತಕನ್ನು ನಿನ್ನೆ ತಾನೇ ನಗರದ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದಾವಣಗೆರೆಯ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್, ಪುಸ್ತಕವನ್ನ ಸೃಷ್ಟಿ ಮಾಡಿದ ಸಂಪಾದಕರಾದ ನಲ್ಲೂರು ಲಕ್ಷö್ಮಣ್‌ರಾವ್, ದಾವಣಗೆರೆಯ ರೇವಣಕರ್ ಪರಿವಾರದ ನೂತನ ಅಧ್ಯಕ್ಷರಾದ ಮಂಜುನಾಥ್ ರೇವಣಕರ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ಮಾತನಾಡಿ, ಕೆಲವು ಸಂಘ ಸಂಸ್ಥೆಗಳು ಅರಂಭ ಶೂರತ್ವಕ್ಕೆ ಸೀಮಿತವಾಗುತ್ತವೆ ಒಂದೆರಡು ವರ್ಷಗಳಲ್ಲಿ ಸಂಸ್ಥೆಗಳು ತಣ್ಣಗಾಗುತ್ತದೆ.

ಈ ಹಂತದಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಹೊಸ ಹೊಸ ಪರಿಕಲ್ಪನೆಯೊಂದಿಗೆ ನಿರಂತರವಾಗಿ ನಡೆಯುತ್ತಿರುವುದು ಸಂಸ್ಥೆಯ ಸಾಧನೆ. ಓದು, ಬರಹದೊಂದಿಗೆ ನಾವು ನೀವೆಲ್ಲರೂ ತೊಡಗಿಸಿಕೊಂಡರೆ ನಮ್ಮ ನಿಮ್ಮೆಲ್ಲರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ಜ್ಯೋತಿ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಮಾಯಣ, ಮಹಾಭಾರತ, ಭಗವದ್ಗೀತೆ ಗ್ರಂಥಗಳನ್ನು ಈಗಿನ ಯುವ ಜನತೆಗೆ ಶಿಕ್ಷಣದ ಜೊತೆಗೆ ಓದುವ ಹವ್ಯಾಸಗಳಿಗೆ ತೊಡಗಿಸಿಕೊಂಡರೆ ಅವರೆಲ್ಲರ ಪರೀಕ್ಷೆಗೆ ಉತ್ತಮ ಫಲಿತಾಂಶ ಬರುತ್ತದೆ ಎಂದರು.

ನೇತ್ರಾವತಿ ಸಾಯಿಪ್ರಕಾಶ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಯಶಸ್ವಿ ಸಮಾರಂಭಕ್ಕೆ ಪುಷ್ಪಾ ಮಂಜುನಾಥ ಸ್ವಾಗತಿಸಿದರು. ಚಂದ್ರಶೇಖರ ಅಡಿಗ ಅಚ್ಚುಕಟ್ಟಾಗಿ ನಿರೂಪಿಸಿದರು. ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವನೆಯೊಂದಿಗೆ ಸಂಸ್ಥೆ ನಡೆದು ಬಂದ ದಾರಿ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನಿಂದ ಪುಸ್ತಕ ಸೃಷ್ಟಿ ಮಾಡಿದ ಸಂಪಾದಕರಾದ ನಲ್ಲೂರು ಲಕ್ಷö್ಮಣ್‌ರಾವ್‌ರವನ್ನು ಸನ್ಮಾನಿಸಿದರು. ಕೊನೆಯಲ್ಲಿ ಸುಮಾ ಏಕಾಂತಪ್ಪ ವಂದಿಸಿದರು.

LEAVE A REPLY

Please enter your comment!
Please enter your name here