ಕಾಸರಗೋಡು : ನಗರದ ಸಮೀಪ ನುಳ್ಳಿಪ್ಪಾಡಿ ಪಿ. ಎಮ್. ಎಸ್. ರಸ್ತೆಯಲ್ಲಿರುವ ಅನಂಗೂರ್ ಶ್ರೀ ಧೂಮಾವತಿ ದೈವಸ್ಥಾನ ದಲ್ಲಿ ಏ.5ರಂದು ಧರ್ಮ ನೇಮ

0
43

ಏಪ್ರಿಲ್ 5.ಭಾನುವಾರ ನುಳ್ಳಿಪ್ಪಾಡಿಯ “ಅನಂಗೂರ್ ಶ್ರೀ ದೂಮಾವತಿ ದೈವಸ್ಥಾನದಲ್ಲಿ ವರ್ಷಮ್ಪ್ರತಿ ನಡೆಯುವ ಧರ್ಮ ನೇಮ ನಡೆಯಲಿದೆ.

ಇದರ ಪ್ರಯುಕ್ತ 27-3-2026.ರಂದು ತಂಬಿಲ ಸೇವೆ ನಡೆಯಲಿದೆ. 4-4-2026.ಶನಿವಾರ ರಾತ್ರಿ 7ಕ್ಕೆ ಗುಳಿಗನ ಕೋಲ ರಾತ್ರಿ 8ಕ್ಕೆ “ಯಕ್ಷಗಾನ ಬಯಲಾಟ “ಇರುವುದು. 5-4-2026. ಭಾನುವಾರ ಬೆಳಿಗ್ಗೆ 9 ರಿಂದ ದೂಮಾವತಿ ದೈವ ಕೋಲ -ಅನ್ನ ಸಂತರ್ಪಣೆ ನಡೆಯಲಿದೆ.

1ಗಂಟೆ ನಂತರ ಇತರ ದೈವ ಕೋಲ ಗಳು ಇರುವುದು. ಸಂಜೆ 4ಕ್ಕೆ ಕಾರಣಿಕ ಪೊಟ್ಟ ದೈವ ಕೋಲ, ರಾತ್ರಿ 8ಕ್ಕೆ ಸಮೀಪದ ಕಾಯರ್ಪಳ್ಳ ಗುಳಿಗ ಬನದಲ್ಲಿ ಗುಳಿಗನ ಕೋಲ ದೊಂದಿಗೆ ಧರ್ಮ ನೇಮ ಸಂಪನ್ನ ಗೊಳ್ಳಲಿರುವುದು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಭಗವತ್ ಕಾರ್ಯವನ್ನು ಸಹಾಯ, ಸಹಕಾರ ದೊಂದಿಗೆ ಚಂದಗಾಣಿಸಿ ಕೊಡಬೇಕಾಗಿ, ದೈವಸ್ಥಾನ ಮೊಕ್ತೇಸರರಾದ ಶ್ರೀ ಗೋಪಾಲಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಡಾ. ವಾಮನ್ ರಾವ್ ಬೇಕಲ್

LEAVE A REPLY

Please enter your comment!
Please enter your name here