
ಮಂಗಳೂರಿನಲ್ಲಿ 1843 ಜುಲೈ 1ರಂದು ‘ಮಂಗಳೂರು ಸಮಾಚಾರ’ ಎಂಬ ಕನ್ನಡದ ಪ್ರಥಮ ಪತ್ರಿಕೆಯು ಪ್ರಾರಂಭಗೊಂಡಿತು. ಈ ದಿನ ಕೇರಳ-ಕರ್ನಾಟಕ ರಾಜ್ಯದಾದ್ಯಂತ ಪ್ರತಿವರ್ಷ ಕನ್ನಡ ಪತ್ರಿಕಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲಿ ನಡೆದ ಕನ್ನಡ ಪತ್ರಿಕೋದ್ಯಮದ 142ನೇ ವರ್ಷಾಚರಣೆಯ ಸಂದರ್ಭದಲ್ಲಿ, ಗಡಿನಾಡು ಕಾಸರಗೋಡನ್ನು ಕೇಂದ್ರೀಕರಿಸಿ ಶಿವರಾಮ ಕಾಸರಗೋಡು ಸಂಸ್ಥಾಪಕ ಅಧ್ಯಕ್ಷರಾಗಿ 1985 ಜುಲೈ 1ರಂದು ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘವನ್ನು, ಅಂದಿನ ಕರ್ನಾಟಕ ಪತ್ರಿಕಾ ಅಕಾಡೆಮಿ ಅಧ್ಯಕ್ಷರಾಗಿದ್ದ ಜಿ. ನಾರಾಯಣ ಬೆಂಗಳೂರು ಉದ್ಘಾಟಿಸಿದ್ದರು.
ಕಾಸರಗೋಡಿನಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗ-ಸಹಕಾರದಲ್ಲಿ ಕಳೆದ 40 ವರ್ಷಗಳಿಂದ ವರ್ಷಂಪ್ರತಿ ಜುಲೈ 1ರಂದು ‘ಕನ್ನಡ ಪತ್ರಿಕಾ ದಿನಾಚರಣೆ’ಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಾಸರಗೋಡು-ಕರ್ನಾಟಕ ರಾಜ್ಯದಲ್ಲಿ ಪ್ರಕಟವಾಗುವ ಕನ್ನಡ ದಿನಪತ್ರಿಕೆಗಳ ಪ್ರದರ್ಶನವನ್ನು ಏರ್ಪಡಿಸಿ ಕನ್ನಡ ಪತ್ರಿಕೆಯ ಪ್ರತಿಜ್ಞೆಯನ್ನು ಕೈಗೊಳ್ಳಲಾಗಿದೆ.
ಕಾಸರಗೋಡು ಜಿಲ್ಲೆಯ ಪ್ರತಿಯೋರ್ವ ಕನ್ನಡಿಗರು ಕನ್ನಡಾಭಿಮಾನಿಗಳು ಕನ್ನಡ ದಿನಪತ್ರಿಕೆ, ಕನ್ನಡ ವಾರ ಪತ್ರಿಕೆ, ಕನ್ನಡ ಮಾಸ ಪತ್ರಿಕೆಯನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಪತ್ರಿಕೆ, ಕನ್ನಡ ಪುಸ್ತಕಗಳನ್ನು ಹಣಕೊಟ್ಟು ಖರೀದಿಸುವ ಮೂಲಕ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳಬೇಕು. ಇದು ಕನ್ನಡ ಪತ್ರಿಕಾ ದಿನಾಚರಣೆಯ ಪ್ರಧಾನ ಉದ್ದೇಶವಾಗಿದೆ.
ಸದಸ್ಯತ್ವ ನೋಂದಾವಣೆಗೆ ಆಹ್ವಾನ: ಕಾಸರಗೋಡು ಜಿಲ್ಲೆ, ಜಿಲ್ಲೆ, ದಕ್ಷಿಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದು, ಜಿಲ್ಲಾ, ರಾಜ್ಯ ಪತ್ರಿಕೆಗಳಿಗೆ ಫ್ರೀಲಾನ್ಸ್ ಪತ್ರಕರ್ತರಾಗಿ, ಹವ್ಯಾಸಿ ಪತ್ರಕರ್ತರಾಗಿ. ಅರೆಕಾಲಿಕ ವರದಿಗಾರರಾಗಿ ನಿರಂತರವಾಗಿ ಪತ್ರಿಕಾ ಬರಹದ ಮೂಲಕ ಗುರುತಿಸಿಕೊಳ್ಳುವವರು ಹಾಗೂ ವಿವಿಧ ಸುದ್ದಿ ವಾಹಿನಿಗಳು, ಪತ್ರಿಕಾ, ದೃಶ್ಯ ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ರೀಲಾನ್ಸ್ ಪತ್ರಕರ್ತರು, ಹವ್ಯಾಸಿ ಪತ್ರಕರ್ತರು, ಮಾಧ್ಯಮ ಮಿತ್ರರು, ತಮ್ಮ ಹೆಸರು, ವಿಳಾಸ, ಮೊಬೈಲ್, ವಾಟ್ಸಪ್ ಸಂಖ್ಯೆ, ಇ-ಮೇಲ್, ಪಾಸ್‌ಪೋರ್ಟ್ ಸೈಜ್‌ನ ಫೋಟೊದೊಂದಿಗೆ ಸ್ವ-ಪರಿಚಯವನ್ನು ಮೊಬೈಲ್‌ನಲ್ಲಿ ಕನ್ನಡದಲ್ಲಿ ಟೈಪ್ ಮಾಡಿ, ಶಿವರಾಮ ಕಾಸರಗೋಡು, ಮೊಬೈಲ್ 9448572016 ಇವರಿಗೆ ಕಳುಹಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ.
ಪತ್ರಿಕೆಗಳಿಗೆ ಪತ್ರಿಕಾ ವರದಿ, ಸುದ್ದಿಯನ್ನು ಕಳುಹಿಸುವ ಕುರಿತು ಪತ್ರಿಕಾ ಸಂಪಾದಕರು, ವರದಿಗಾರರು, ತಜ್ಞರಿಂದ ತರಬೇತಿ ಶಿಬಿರ: ಕಾಸರಗೋಡು ಜಿಲ್ಲೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ಸಂಘ ಸಂಸ್ಥೆಗಳು, ಉದ್ಯಮ ವ್ಯವಹಾರದ ಸಂಸ್ಥೆಗಳು, ಶಾಲಾ, ಕಾಲೇಜುಗಳ ಮಾಧ್ಯಮ ವಕ್ತಾರರು, ಫ್ರೀಲಾನ್ಸ್ ಪತ್ರಕರ್ತರು, ಹವ್ಯಾಸಿ ಪತ್ರಕರ್ತರು, ಪತ್ರಿಕಾ ಸಂಪಾದಕರು ಹಾಗೂ ಕಾರ್ಯನಿರತ ಪತ್ರಕರ್ತರನ್ನು ಒಂದೆಡೆ ಸೇರಿಸಿ ಪತ್ರಿಕೆಗಳಿಗೆ ಪತ್ರಿಕಾ ವರದಿ, ಸುದ್ದಿಯನ್ನು ಕಳುಹಿಸುವ ಕುರಿತು ಪತ್ರಿಕಾ ಬರವಣಿಗೆ ತರಬೇತಿ ಶಿಬಿರವನ್ನು ಶೀಘ್ರದಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ.
ಮನವಿ: ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಪತ್ರಕರ್ತರ ಕ್ಷೇತ ಕ್ಷೇಮಾಭಿವೃದ್ಧಿ ಸಂಘ, ಕಾಸರಗೋಡು ಇದರ ಅಂಗೀಕಾರ ಪಡೆಯುವುದು ಮತ್ತು ಪತ್ರಿಕೋದ್ಯಮ, ಛಾಯಾಗ್ರಹಣ ತರಬೇತಿ ಶಿಬಿರವನ್ನು ಸಂಘ ಸಂಸ್ಥೆಗಳು -ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲು ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗ ಸಹಕಾರವನ್ನು ಪಡೆಯಲು ತೀರ್ಮಾನಿಸಲಾಗಿದೆ.
ಸಂಪರ್ಕ: ಶಿವರಾಮ ಕಾಸರಗೋಡು, ಸಂಸ್ಥಾಪಕ ಅಧ್ಯಕ್ಷರು, ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘ, ಕನ್ನಡ ಗ್ರಾಮ, ಕಾಸರಗೋಡು – 671121. ಮೊಬೈಲ್ : 9448572016, E-MAIL: shivaramakasaragod@gmail.com

