ವರದಿ :-ಮಂದಾರ ರಾಜೇಶ್ ಭಟ್

ಬೆಂಗಳೂರು/ತುಮಕೂರು : ಮಾಧ್ಯಮ ಲೋಕದ ಶಕ್ತಿಯಾಗಿ, ಪತ್ರಕರ್ತರ ಹಿತರಕ್ಷಣೆಗಾಗಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ‘ಸಮಾನಮನಸ್ಕ ಮಾಧ್ಯಮ ಮಿತ್ರರ ವೇದಿಕೆ’ ಈಗ ತನ್ನ ದಶಮಾನೋತ್ಸವದ ಸಂಭ್ರಮದಲ್ಲಿದೆ.
ಈ ವಿಶೇಷ ಸಂದರ್ಭದ ಅಂಗವಾಗಿ ಮೇ 24, 2026ರಂದು ತುಮಕೂರು ಜಿಲ್ಲೆಯ ಗುಬ್ಬಿಯ ಶ್ರೀ ಚಿದಂಬರ ಆಶ್ರಮದಲ್ಲಿ “ವಿಕಾಸ ಸಂಭ್ರಮ – 2026” ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
ಮಾಧ್ಯಮ ಮಿತ್ರರ ಧ್ವನಿ
ಕಳೆದ ಒಂದು ದಶಕದಿಂದ ಸಮಾಜಮುಖಿ ಸೇವೆ ಮತ್ತು ಮಾಧ್ಯಮ ಮಿತ್ರರ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿರುವ ಈ ವೇದಿಕೆಯು ಸದ್ಯ 365ಕ್ಕೂ ಹೆಚ್ಚು ಸದಸ್ಯರ ಬಲವನ್ನು ಹೊಂದಿದೆ. ಸದಸ್ಯರ ಕುಟುಂಬದಲ್ಲಿ ಅನಾರೋಗ್ಯ, ಆರ್ಥಿಕ ಅಥವಾ ಸಾಮಾಜಿಕ ಸಮಸ್ಯೆಗಳು ಎದುರಾದಾಗ ತಕ್ಷಣವೇ ಸ್ಪಂದಿಸುವ ಮೂಲಕ ಸಂಘಟನೆಯು ಮಾನವೀಯತೆಯನ್ನು ಮೆರೆದಿದೆ.
ಈ ಹಿಂದೆ ಉಡುಪಿಯ ಗೀತಾ ಮಂದಿರದಲ್ಲಿ ನಡೆದ ಕಾರ್ಯಕ್ರಮದ ಯಶಸ್ಸಿನ ನಂತರ, ಈ ಬಾರಿ ಗುಬ್ಬಿಯಲ್ಲಿ ಮತ್ತೊಂದು ಐತಿಹಾಸಿಕ ಸಮಾವೇಶಕ್ಕೆ ಸಿದ್ಧತೆ ನಡೆದಿದೆ.
ಕಾರ್ಯಕ್ರಮದ ವಿಶೇಷತೆಗಳು
ಪ್ರತಿಭಾ ಪುರಸ್ಕಾರ- ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಸನ್ಮಾನ.
ಸಾಧಕರಿಗೆ ಗೌರವ-
ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರನ್ನು ಮತ್ತು ಸಾಧಕ ಯುವ ಮಿತ್ರರನ್ನು ಹಾಗೂ ಸಾಧಕರನ್ನು ಗೌರವಿಸಲಾಗುವುದು.
ಕ್ರೀಡಾ ಪತ್ರಕರ್ತರಿಗೆ ಪ್ರಶಸ್ತಿ-
ಹಿರಿಯ ಕ್ರೀಡಾ ಪತ್ರಕರ್ತ ದಿವಂಗತ ಡಿ. ವಿನಾಯಕ ದೇಶಪಾಂಡೆ ಅವರ ಸ್ಮರಣಾರ್ಥವಾಗಿ ಅರ್ಹ ಕ್ರೀಡಾ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಾಷ್ಟ್ರಮಟ್ಟಕ್ಕೆ ವಿಸ್ತರಣೆಯ ಗುರಿ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಕ್ರಿಯ ಸಂಘಟನಾ ಮುಖ್ಯಸ್ಥರನ್ನು ಹೊಂದಿರುವ ವೇದಿಕೆಯು, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬೃಹತ್ ಕಾರ್ಯಕ್ರಮ ನಡೆಸುವ ಯೋಜನೆಯನ್ನು ರೂಪಿಸಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಸದಸ್ಯರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಸಂಪರ್ಕ ಮತ್ತು ನೋಂದಣಿ
ಕಾರ್ಯಕ್ರಮಕ್ಕೆ ಸದಸ್ಯರು, ಅವರ ಕುಟುಂಬಸ್ಥರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಸದಸ್ಯತ್ವ ನೋಂದಣಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು.
ಹನುಮೇಶ ಯಾವಗಲ್ (ರಾಜ್ಯ ಪ್ರಧಾನ ಕಾರ್ಯದರ್ಶಿ): 98440 30946
ಹರೀಶ್ ಕೆ. ಆಡೂರು (ಜಿಲ್ಲಾ ಮುಖ್ಯ ಸಂಚಾಲಕರು, ದಕ್ಷಿಣ ಕನ್ನಡ): 94834 55922
ಡಾ. (HC) ಮಂದಾರ ರಾಜೇಶ್ ಭಟ್ (ರಾಜ್ಯ ಉಪಾಧ್ಯಕ್ಷರು): 8088 88339
ಶಿವಮೊಗ್ಗ ಜಿಲ್ಲೆಯ ವಿಕಾಸ ಸಂಚಾಲಕರಾದ ಶ್ರೀ. ಆದಿತ್ಯ ಪ್ರಸಾದ್ ಸಂಖ್ಯೆ:9449508060.
ಅಂತೆಯೇ ಆಯಾ ಜಿಲ್ಲೆಗಳ ವೇದಿಕೆಯ ಮುಖ್ಯಸ್ಥರುಗಳನ್ನು ಅಥವಾ ರಾಜ್ಯ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ವಿಕಾಸ ಸಂಭ್ರಮ 2026 ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯ ವಿಕಾಸ ಸಂಚಾಲಕರಾದ ಭಾರತೀಶ ರಾವ್ ಹೊನ್ನಾಳಿ ಮತ್ತು ಅವರ ತಂಡ ಸಂಪೂರ್ಣ ಸಹಕಾರ ನೀಡಲಿದ್ದು ಈಗಾಗಲೇ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಕೆಲಸವನ್ನು ಆರಂಭಿಸಿದ್ದಾರೆ.
ಈ ಅರ್ಥಪೂರ್ಣ ಸಮಾವೇಶವು ಸಂಘಟನೆಯ ಮುಂದಿನ ಬೃಹತ್ ಯೋಜನೆಗಳ ಬಗ್ಗೆ ಚರ್ಚಿಸಲು ವೇದಿಕೆಯಾಗಲಿದ್ದು, ಎಲ್ಲ ಜಿಲ್ಲೆಗಳ ಸಂಚಾಲಕರು ಸದಸ್ಯರು ಹಾಗೂ ಹಿತೈಷಿಗಳು ಪಾಲ್ಗೊಳ್ಳುವಂತೆ ವಿಕಾಸ ಗೌರವಾಧ್ಯಕ್ಷರು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಈ ಬಾರಿಯ ವಿಕಾಸ ಕಾರ್ಯಕ್ರಮದಲ್ಲಿ ವಿಕಾಸ ಸದಸ್ಯರು ಬರೆದ ಮತ್ತು ಪ್ರಕಟಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದ್ದು ಗುಬ್ಬಿಯ ಕಾರ್ಯಕ್ರಮದಲ್ಲಿ ತಮ್ಮ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲು ಬಯಸುವವರು ವಿಕಾಸದ ರಾಜ್ಯ ಸಂಘಟನಾ ಕಾರ್ಯದರ್ಶಿ ವೈದ್ಯ ಲೋಕ ಪತ್ರಿಕೆಯ ಸಂಪಾದಕ ಶ್ರೀಕೃಷ್ಣ ಭಟ್ ಮಾಯ್ಲೇಂಗಿ 98440 60592ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಕೋರಲಾಗಿದೆ.

