ಕಸ್ತೂರ್ಬಾ ಮೆಡಿಕಲ್ ಕಾಲೇಜು (KMC), ಮಣಿಪಾಲ , ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯಾ (API), ಉಡುಪಿ-ಮಣಿಪಾಲ ಗ್ಯಾಸ್ಟ್ರೋ-ಮೆಡಿಸಿನ್ ಕಾರ್ಯಾಗಾರ

0
36

ಉಡುಪಿ : GUT INSTINCTS 2026, ಒಂದು ದಿನದ ಗ್ಯಾಸ್ಟ್ರೋ-ಮೆಡಿಸಿನ್ ಕೇಸ್ ಆಧಾರಿತ ನಿರಂತರ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮವು 2026ರ ಜೂನ್ 14ರಂದು ಉಡುಪಿಯ ಪೆನಿನ್ಸುಲಾ ಡೆಲ್ ಮಾರ್, ಎರ್ಮಾಳ್  ನಲ್ಲಿ 1 ದಿನದ  ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮವನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜು (KMC), ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗಗಳು, ಇಂಡಿಯನ್ ಸೊಸೈಟಿ ಆಫ್ ಗ್ಯಾಸ್ಟ್ರೋಎಂಟರಾಲಜಿ (ISG) – ಕರ್ನಾಟಕ ಚಾಪ್ಟರ್ ಮತ್ತು ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯಾ (API), ಉಡುಪಿ-ಮಣಿಪಾಲ ಚಾಪ್ಟರ್ ಸಹಯೋಗದಲ್ಲಿ ಸ್ವಪನ್ನ ಗೊಂಡಿತು.

ಈ CME ಕಾರ್ಯಕ್ರಮವು ಸ್ನಾತಕೋತ್ತರ ವಿದ್ಯಾರ್ಥಿಗಳು, ತರಬೇತಿ ವೈದ್ಯರು, ವೈದ್ಯರು ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳನ್ನು ಒಂದೇ ವೇದಿಕೆಗೆ ತರಲು ನೆರವಾಯಿತು. ಜೀರ್ಣಾಂಗ ಸಂಬಂಧಿತ ಕಾಯಿಲೆಗಳ ನಿರ್ವಹಣೆಯಲ್ಲಿ ಸಾಕ್ಷ್ಯಾಧಾರಿತ (Evidence-Based) ವೈದ್ಯಕೀಯ ಅಭ್ಯಾಸದ ಮಹತ್ವವನ್ನು ಒತ್ತಿಹೇಳುವ ಉದ್ದೇಶದಿಂದ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ತಜ್ಞ ವೈದ್ಯರ ಉಪನ್ಯಾಸಗಳು, ಸಾಕ್ಷ್ಯಾಧಾರಿತ ವೈದ್ಯಕೀಯ ಅಭ್ಯಾಸದ ಕುರಿತು ಚರ್ಚೆಗಳು, ಕೇಸ್ ಆಧಾರಿತ ಪ್ಯಾನೆಲ್ ಚರ್ಚೆಗಳು, ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ GI GRIND ಗ್ಯಾಸ್ಟ್ರೋ ಕ್ವಿಜ್ ಸೇರಿದ್ದವು. ನೈಜ ವೈದ್ಯಕೀಯ ಪ್ರಕರಣಗಳ ಕುರಿತು ನಡೆದ ಚರ್ಚೆಗಳು ಭಾಗವಹಿಸಿದವರಿಗೆ ಕ್ಲಿನಿಕಲ್ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿಯಾಯಿತು.  ಜೊತೆಗೆ ತಜ್ಞರೊಂದಿಗೆ ವಿಚಾರ ವಿನಿಮಯ ಪ್ರಶ್ನೆ ಉತ್ತರ ಕಾರ್ಯಕ್ರಮ  ಹಾಗೂ      ಗ್ಯಾಸ್ಟ್ರೋ-ಮೆಡಿಸಿನ್ ಕೇಸ್ ಆಧಾರಿತ   ಕ್ವಿಜ್ ಸ್ಪರ್ಧೆ  ನೆಡೆಯಿತು  ವಿಜೇತ  ವಿದ್ಯಾರ್ಥಿಗಳಿಗೆ   ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಸಂಘಟನಾ ಸಮಿತಿಯಲ್ಲಿ ಕೆ.ಎಂ.ಸಿ ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಶಿರನ್ ಶೆಟ್ಟಿ ಹಾಗೂ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ|| ಎಂ. ಮುಖ್ಯಪ್ರಾಣ ಪ್ರಭು ಹಾಗೂ ಡಾ|| ಅರ್ಜುನ್ ಬಲ್ಲಾಳ್ , ಎ.ಪಿ.ಐ ಉಡುಪಿ-ಮಣಿಪಾಲ ಚಾಪ್ಟರ್  ಡಾ. ಸುರೇಶ್ ಹೆಗ್ಡೆ (ಅಧ್ಯಕ್ಷರು), ಡಾ. ಅನಂತ್ ಎಸ್. ಶೆಣೈ (ಕಾರ್ಯದರ್ಶಿ) ಹಾಗೂ ಡಾ. ಸುದೀಪ್ ಶೆಟ್ಟಿ (ಖಜಾಂಚಿ), ಅವರು ಪ್ರಮುಖ ಪಾತ್ರವಹಿಸಿದ್ದರು. ಎಲ್ಲರ ಸಹಕಾರ ದೊಂದಿಗೆ  ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

, GUT INSTINCTS 2026 ಕಾರ್ಯಕ್ರಮವು ವೈದ್ಯಕೀಯ ವೃತ್ತಿಪರರ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ, ಗ್ಯಾಸ್ಟ್ರೋಎಂಟರಾಲಜಿ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಪರಿಣಾಮಕಾರಿ ಶೈಕ್ಷಣಿಕ ವೇದಿಕೆಯಾಗಿದ್ದು, ಎಲ್ಲರಿಂದಲೂ ಉತ್ತಮ ಪ್ರಶಂಸೆಯನ್ನು ಪಡೆದಿತು.

LEAVE A REPLY

Please enter your comment!
Please enter your name here