ಕಟೀಲಿನ ಶ್ರುತಿಕಾಗೆ ಅಲೈಡ್ ಹೆಲ್ತ್ ಸೈನ್ಸ್ ನಲ್ಲಿ ಎರಡು ಚಿನ್ನದ ಪದಕ

0
49

ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕಟೀಲಿನ ಶ್ರುತಿಕಾ ಅವರಿಗೆ ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಶ್ರುತಿಕಾ ಅವರು ಮಂಗಳೂರಿನ ಎ.ಜೆ. ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯಲ್ಲಿ ಬಿ. ಎಸ್ಸಿ ನ್ಯೂರೋಸೈನ್ಸ್ ವಿದ್ಯಾರ್ಥಿನಿಯಾಗಿದ್ದು, ಕಟೀಲು ಮಲ್ಲಿಗೆ ಅಂಗಡಿಯ ದಯಾನಂದ ಪೂಜಾರಿ ಮತ್ತು ಸವಿತಾ ದಂಪತಿಯ ಪುತ್ರಿಯಾಗಿದ್ದಾರೆ.

ಶ್ರುತಿಕಾ ಬೆಂಗಳೂರಿನ ಜಿಕೆವಿಕೆ (GKVK) ಆವರಣದಲ್ಲಿ ಜರುಗಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ, ಶ್ರುತಿಕಾ ಅವರು ಬಿ. ಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ನಲ್ಲಿ ದ್ವಿತೀಯ ಹಾಗೂ ತೃತೀಯ ವರ್ಷದಲ್ಲಿ ಗರಿಷ್ಠ ಅಂಕ ಪಡೆದ ಕಾರಣ, ಅವರಿಗೆ 2 ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಶ್ರುತಿಕಾ ಅವರು, ಮುಂದೆ ಇದೇ ಕ್ಷೇತ್ರದಲ್ಲಿ ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರಿಸಲಿದ್ದು, ಎಂಎಸ್ಸಿ ನ್ಯೂರೋಸೈನ್ಸ್ ಅಧ್ಯಯನ ಮಾಡಲು ನಿರ್ಧರಿಸಿದ್ದಾರೆ.

ಚಿನ್ನದ ಪದಕ ವಿಜೇತ ಶ್ರುತಿಕಾ ಅವರ ಈ ಸಾಧನೆಗೆ, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಹಾಗೂ ಕುಟುಂಬದ ಬಂಧು ಮಿತ್ರರು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here