ಜು.26ರಂದು ಕೊಳಕೆ ಇರ್ವತ್ತೂರಿನಲ್ಲಿ ‘ಕೆಸರ್ ಡ್ ಒಂಜಿ ದಿನ-2026’

0
22

ಕಾರ್ಕಳ : ಯೂತ್ ಫ್ರೆಂಡ್ಸ್ ಕೊಳಕೆ ಇರ್ವತ್ತೂರು ಇದರ ಆಶ್ರಯದಲ್ಲಿ ಪ್ರಥಮ ವರ್ಷದ “ಕೆಸರ್ ಡ್ ಒಂಜಿ ದಿನ-2026” ಕಾರ್ಯಕ್ರಮವು ಜುಲೈ 26ರಂದು (ಭಾನುವಾರ) ವೈವಿಧ್ಯಮಯ ಗ್ರಾಮೀಣ ಕ್ರೀಡಾ ಸ್ಪರ್ಧೆಗಳೊಂದಿಗೆ ನಡೆಯಲಿದೆ.

ಪೊಡುಂಬ ಗದ್ದೆ, ಗುರಂತಿಬೆಟ್ಟು ಮನೆಯ ಮುಂಭಾಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಹಾಗೂ ಮುಕ್ತ ತಂಡಗಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

10 ಹಾಗೂ 15 ವರ್ಷದೊಳಗಿನ ಮಕ್ಕಳಿಗೆ ಓಟ, ಅಂಬು-ಚಮಚ, ಮಡಿಕೆ ಒಡೆಯುವುದು, ಹಾಳೆ ಎಳೆಯುವ ಓಟ, ತಪ್ಪಂಗಾಯಿ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ.

ಮಹಿಳೆಯರಿಗಾಗಿ ಓಟ, ಹಿಂಬದಿ ಓಟ, ಮಡಿಕೆ ಒಡೆಯುವುದು, ಹಾಳೆ ಎಳೆಯುವ ಓಟ, ಅಂಬು ಪಂಪ್, ಮೂರು ಕಾಲಿನ ಓಟ, ಗಿರ್ಗಿರ್ ಮಂಡಲ ಹಾಗೂ ಗ್ರಾಮೀಣ ಮಹಿಳಾ ತಂಡಗಳಿಗೆ ಪ್ರೋಬಾಲ್ ಸ್ಪರ್ಧೆ ಏರ್ಪಡಿಸಲಾಗಿದೆ.

ಪುರುಷರಿಗಾಗಿ ಓಟ, ಹಿಂಬದಿ ಓಟ, ಮಡಿಕೆ ಒಡೆಯುವುದು, ಮಾನವ ಗೋಪುರ, ಹಾಳೆ ಎಳೆಯುವ ಓಟ, ಐದು ಕಾಲಿನ ಓಟ, ಗಿರ್ಗಿರ್ ಮಂಡಲ ಹಾಗೂ ಗ್ರಾಮೀಣ ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ.

ಇದಲ್ಲದೆ, ಮುಕ್ತ ಪುರುಷ ಹಾಗೂ ಮಹಿಳಾ ತಂಡಗಳಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಲಾಗುತ್ತದೆ.

ಸ್ಪರ್ಧೆಗಳಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 6360720819, 9632636030, 8971768412, 9108165975, 8550820872 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಯೂತ್ ಫ್ರೆಂಡ್ಸ್ ಕೊಳಕೆ ಇರ್ವತ್ತೂರು ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರು ಸಾರ್ವಜನಿಕರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಹ್ವಾನಿಸಿದ್ದಾರೆ.