ಬನ್ನಡ್ಡ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಕೇಶವ್ ಪೂಜಾರಿ, ಕಾರ್ಯದರ್ಶಿಯಾಗಿ ವಿವೇಕ್ ಕಾಮತ್ ಆಯ್ಕೆ

0
13

ಬನ್ನಡ್ಡ : ಶ್ರೀ ಗಣೇಶೋತ್ಸವ ಸಮಿತಿ ಬನ್ನಡ್ಡದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಕೇಶವ್ ಪೂಜಾರಿ ಬನ್ನಡ್ಡ ಹಾಗೂ ಕಾರ್ಯದರ್ಶಿಯಾಗಿ ವಿವೇಕ್ ಕಾಮತ್ ಬನ್ನಡ್ಡ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಮಿತಿಯ ಸದಸ್ಯರು ಹಾಗೂ ಗಣ್ಯರು ಹರ್ಷದಿಂದ ಸ್ವಾಗತಿಸಿದ್ದು, ಮುಂಬರುವ ಶ್ರೀ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಅವರ ನಾಯಕತ್ವದಲ್ಲಿ ಸಮಿತಿ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.