Thursday, May 1, 2025
HomeUncategorizedಕಿನ್ನಿಗೋಳಿ: ಐಕಳ ತಿರುವಿನಲ್ಲಿ ಸ್ಕೂಟರ್ ಗೆ ಲಾರಿ ಡಿಕ್ಕಿ- ಮಹಿಳೆಗೆ ಗಂಭೀರ ಗಾಯ

ಕಿನ್ನಿಗೋಳಿ: ಐಕಳ ತಿರುವಿನಲ್ಲಿ ಸ್ಕೂಟರ್ ಗೆ ಲಾರಿ ಡಿಕ್ಕಿ- ಮಹಿಳೆಗೆ ಗಂಭೀರ ಗಾಯ


ಮುಲ್ಕಿ:ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಐಕಳ ತಿರುವು ಬಳಿ ಸ್ಕೂಟರ್ ಗೆ ಲಾರಿ ಡಿಕ್ಕಿಯಾಗಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ನಿಡ್ಡೋಡಿ ಶುಂಠಿಲಪದವು ನಿವಾಸಿ ವಿಶಾಲಾಕ್ಷಿ (32) ಎಂದು ಗುರುತಿಸಲಾಗಿದೆ
ಮೂಡಬಿದ್ರೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಲಾರಿಯು ಕಿನ್ನಿಗೋಳಿ ಕಡೆಯಿಂದ ಐಕಳ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸವಾರೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular