ಕಿನ್ನಿಗೋಳಿ: ಕಿನ್ನಿಗೋಳಿ ಏಳಿಂಜೆ ಹೆದ್ದಾರಿಯ ದಾಮಸ್ ಕಟ್ಟೆ ಬಳಿ ಸ್ಕೂಟರ್ ಬೈಕ್ ಡಿಕ್ಕಿಯಾಗಿ ಸವಾರರು ಗಾಯಗೊಂಡಿದ್ದಾರೆ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಏಳಿಂಜೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಸ್ಕೂಟರ್ ದಾಮಸ್ ಕಟ್ಟೆ ಚರ್ಚ್ ಬಳಿ ಅದರ ಸವಾರ ಬಲಬದಿಗೆ ಗುತ್ತ ಕಾಡು ಕಡೆಗೆ ಹೋಗುವ ಒಳ ರಸ್ತೆಗೆ ತಿರುಗಿಸಿದ್ದು ಹಿಂದಿನಿಂದ ಅತಿ ವೇಗದಿಂದ ಬರುತ್ತಿದ್ದ ಬೈಕ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬೈಕ್ ಚರಂಡಿಗೆ ಹೋಗಿ ಬಿದ್ದಿದ್ದು ಸ್ಕೂಟರ್ ಕೂಡ ಜಖಂಗೊಂಡಿದೆ ಈ ವೇಳೆ ಸ್ಕೂಟರ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಉಪ್ಪಿನಕಾಯಿ ರಸ್ತೆವಿಡಿ ಮತ್ತು ಬೈಕ್ ಹಾಗೂ ಸ್ಕೂಟರ್ ಮೇಲೆ ಬಿದ್ದಿದೆ. ಗಾಯಾಳುಗಳ ಬಗ್ಗೆ ಮಾಹಿತಿ ಬರಬೇಕಾಗಿದೆ.
ಅಪಘಾತದ ದೃಶ್ಯ ಸ್ಥಳೀಯ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ದಾಮಸ್ ಕಟ್ಟೆ-ಏಳಿಂಜೆ ರಸ್ತೆ ಮರುಡಾಮರಿಕರಣಗೊಂಡಿದ್ದು ವಾಹನ ಸವಾರರು ಅತಿ ವೇಗದಲ್ಲಿ ಚಲಿಸುತ್ತಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಭಾಗದಲ್ಲಿ ಹಲವು ಅಪಘಾತಗಳು ಪದೇ ಪದೇ ನಡೆಯುತ್ತಿದ್ದು ಅತಿ ವೇಗದಿಂದ ಬರುವ ವಾಹನಗಳಿಗೆ ವೇಗ ತಡೆಗೆ ಬ್ಯಾರಿಕೇಡ್ ಗಳನ್ನು ಶೀಘ್ರವಾಗಿ ಅಳವಡಿಕೆ ಮಾಡಬೇಕಾಗಿದೆ ಮತ್ತು ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕಾಗಿದೆ ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.