ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಸಾಂಸ್ಕೃತಿಕ ಕೊಡುಗೆಯಾಗಿರುವ ಕಲಾಕುಂಚ ಸಂಸ್ಥೆ ಅದರ ರುವಾರಿಗಳಾದ ಸಾಲಿಗ್ರಾಮ ಗಣೇಶ ಶೆಣೈ ಅವರು ವೈದಿಕ ಪರಂಪರೆಯಲ್ಲೇ ಹುಟ್ಟಿ ಬೆಳೆದು ಬಂದಿದ್ದರೂ ಬಸವಣ್ಣನವರ ವೈಚಾರಿಕತೆಯ ನಡೆನುಡಿಯ ಆದರ್ಶ ಪಾಲಿಸುತ್ತಾ ಜಾತಿ ಭೇದ, ಲಿಂಗ ತಾರತಮ್ಯ ಹೆಣ್ಣಿನ ಶೋಷಣೆ ಸಂಬAಧಿತ ಯಾವುದೇ ಮೌಢ್ಯತೆಗಳನ್ನು ನಂಬದೆ ಇಂತಹ ಮಾನವತಾ ಧರ್ಮದ ಕಾಯಕಗಳನ್ನು ಮಾಡುತ್ತಾ ಅನುಪಾಲನಾ ಆಚಾರವಾಗಿ ನಿತ್ಯ ಜೀವನದ ನಡೆಯಲ್ಲಿ ಪಾಲಿಸುತ್ತಾ ಬಂದಿರುವುದು ಅವರ ಆದರ್ಶ ವ್ಯಕ್ತಿತ್ವಕ್ಕೆ ಕನ್ನಡಿ ಅನ್ನಿಸಿದೆ ಎಂದು ಸಾಹಿತಿ ಎ.ಸಿ.ಶಶಿಕಲಾ ಶಂಕರಮೂರ್ತಿ ಹೇಳಿದರು.
ಇಲ್ಲಿನ ದೊಡ್ಡಪೇಟೆಯ ವಿರಕ್ತಮಠದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಬಸವ ಕೇಂದ್ರ ವಿರಕ್ತಮಠ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದಿಂದ ಆಯೋಜಿಸಿದ ಬಸವ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಧರ್ಮವಾದರೂ ಮಾನವತೆಯನ್ನೇ ಹೇಳುತ್ತದೆ. ಆದರೆ ಮನುಷ್ಯ ತನ್ನ ಸ್ವಾರ್ಥದಿಂದ ಅಜ್ಞಾನ ಅಂಧಾನುಕರಣೆ ನಡೆಯಿಂದ ಧರ್ಮದ ಹೆಸರಲ್ಲಿ ಅಮಾನುಷ್ಯ ಕೃತ್ಯ ಮಾಡುತ್ತಲೇ ಬರುತ್ತಿದ್ದಾನೆ. ಇದನ್ನು ತಡೆಯಲು ಭಾವನಾತ್ಮಕ ಕವಿಗೋಷ್ಠಿಗಿಂತ ಬಸವಣ್ಣನವರ ವೈಚಾರಿಕತೆಯ ಮಾನವತಾ ನಡೆಯ ವಿಚಾರ ಆಧಾರಿತ ಕವಿತೆಗಳನ್ನು ವಾಚಿಸುವ ವೈಜ್ಞಾನಿಕ ಚಿಂತನೆಯ ಕವಿಗೋಷ್ಠಿಗಳ ಅವಶ್ಯಕತೆ ಇಂದು ತುಂಬಾ ಇದೆ ಅಂತೆಯೇ ನಮ್ಮ ಸಮಾಜದ ಮಠಾಧೀಶ್ವರರು ಇಂತಹ ವಚನ ಚಿಂತನೆಯ ಕವಿ ಗೋಷ್ಠಿಗೆ ಪ್ರೋತ್ಸಾಹ ಮಾಡುತ್ತಿರುವುದು ತುಂಬ ಸಂತೋಷದ ವಿಷಯ ಎಂದರು.
ಲಿಂಗಾಯತ ಅನ್ನುವುದು ಜಾತಿ ಅಲ್ಲ ಅದು ಇತರ ಧರ್ಮಗಳಂತೆ ಮಾನವತೆಯ ಆಚಾರದ ಧರ್ಮ. ಬಸವಣ್ಣನವರು ಅರಿವಿನಿಂದ ಕಟ್ಟಿದ ಈ ಧರ್ಮದಲ್ಲಿ ಇರುವುದೆಲ್ಲಾ ಮಾನವತೆಯೆ.ಇಲ್ಲಿ ಮೌಢ್ಯತೆಗಳು, ಭೇದಭಾವಗಳು ಇಲ್ಲ. ಶುದ್ಧ ಕಾಯಕ ಯೋಗದ ಸಾಕಾರ ಬದುಕು ಬೆಳಕು ಶರಣರದ್ದು. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರAಗ ಶುದ್ಧಿ ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮ ದೇವನೊಲಿಸುವ ಪರಿ, ಬಸವಣ್ಣನವರ ಈ ಸಪ್ತ ವೈಚಾರಿಕ ಹಾಗೂ ನೈತಿಕ ನಡೆಯ ವಚನ ಸೂತ್ರ ಪಾಲನೆ ಮಾಡಿದರೆ ಸಾಕು, ಅದೇ ವಿಶ್ವಮಾನವನನ್ನಾಗಿಸಿ ಶರಣನನ್ನಾಗಿಸುತ್ತದೆ. ಇದೇ ಮನುಷ್ಯತ್ವ ಧರ್ಮ, ಲಿಂಗಾಯತ ಧರ್ಮ, ಬಸವಧರ್ಮ ಎಂದು ಹೇಳಿದರು.
ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಬಸವಣ್ಣನವರು ವಚನ ಸಾಹಿತ್ಯಗಳ ಮುಖಾಂತರ ಇಂದು ಎಲ್ಲರ ಮನೆ ಮನದಲ್ಲಿದ್ದಾರೆ. ವಿಶ್ವದ ಮಾನವ ಹಕ್ಕುಗಳ ಪ್ರಥಮ ಹೋರಾಟಗಾರ ಬಸವಣ್ಣ. ಬಸವಣ್ಣನವರ ತತ್ವಗಳು ಪ್ರಸ್ತುತ ಜೀವನಕ್ಕೆ ಅಗತ್ಯವಿದೆ. ೯೦೦ ವರ್ಷಗಳ ಹಿಂದೆ ಯಾವುದೇ ರೀತಿಯ ಶಿಕ್ಷಣ, ವಿದ್ಯಾಭ್ಯಾಸ ಅವಕಾಶ ಇರಲಿಲ್ಲ, ಎಲ್ಲರನ್ನೂ ಸಮಾನವಾಗಿ ಕಾಣುವಂತಹ, ಬದುಕುವಂತಹ ಅವಕಾಶಗಳು ಇರಲಿಲ್ಲ. ಬಸವಣ್ಣನವರು ಮಾನವನ ಶೋಷಣೆ ವಿರುದ್ಧ ಹೋರಾಟ ಮಾಡಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಅವಕಾಶ ನೀಡುವಂತೆ ಮಾಡಿದರು. ಸಮಸಮಾಜ ಕಟ್ಟಿದ್ದರ ಹಿನ್ನಲೆಯಲ್ಲಿಂದು ಅವರಿಗೆ ಪ್ರಜಾಪ್ರಭುತ್ವದ ಪಿತಾಮಹ ಎಂದು ಕರೆಯುತ್ತಿದ್ದೇವೆ ಎಂದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಕುಸುಮ ಲೋಕೇಶ, ಕವಯತ್ರಿ ಲಲಿತಾ ಕಲ್ಲೇಶ ಇತರರು ಇದ್ದರು. ಪುಷ್ಪಾ ಮಂಜುನಾಥ ಸ್ವಾಗತಿಸಿದರೆ, ಎಂ.ಎಸ್.ಪ್ರೇಮಾ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಕೆ.ಸಿ.ಉಮೇಶ ವಂದಿಸಿದರು.
Home Uncategorized ಅಜ್ಞಾನದ ಅಂಧಾನುಕರಣೆಗೆ ಜ್ಞಾನ ಬೆಳೆಯುತ್ತಿರುವುದು ಶ್ರೀ ಬಸವಣ್ಣನವರ ಈ ಅಪರೂಪದ ಕವಿಗೋಷ್ಠಿ – ಎ.ಸಿ. ಶಶಿಕಲಾ...

