
ಬಂಟ್ವಾಳ : ಇಲ್ಲಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ವತಿಯಿಂದ 24ನೇ ವರ್ಷ ಪೂಜಿಸಲಾದ ಶಾರದೆ ವಿಗ್ರಹದ ಶೋಭಾಯಾತ್ರೆ ಮಂಗಳವಾರ ರಾತ್ರಿ ನಡೆಯಿತು. ಕೊಯಿಲ ಹನುಮಾನ್ ನಗರದಿಂದ ಅಣ್ಣಳಿಕೆ ಮತ್ತು ರಾಯಿ ನಡುವೆ ನಡೆದ ಆಕರ್ಷಕ ಶೋಭಾಯಾತ್ರೆ ಬಳಿಕ ಕುದ್ಮಾಣಿ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಇದೇ ವೇಳೆ ನೃತ್ಯ ಭಜನೆ ಸಹಿತ ಸ್ತಬ್ಧಚಿತ್ರ ಜೊತೆಗೆ ಸುಡುಮದ್ದು ಪ್ರದರ್ಶನ ಹಾಗೂ ರಸ್ತೆಯ ವಿವಿಧೆಡೆ ಸಂಗೀತ ರಸಮಂಜರಿ, ಯಕ್ಷ ತೆಲಿಕೆ, ವೈರಲ್ ವೈಶಾಲಿ ನಾಟಕ ಪ್ರದರ್ಶನಗೊಂಡಿತು. ಟ್ರಸ್ಟ್ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಪ್ರಮುಖರಾದ ದಿನೇಶ ಶೆಟ್ಟಿ ಮಡಂದೂರು, ವಸಂತ ಕುಮಾರ್ ಅಣ್ಣಳಿಕೆ, ಡೊಂಬಯ ಅರಳ, ರಮಾನಾಥ ರಾಯಿ, ಚಂದ್ರಶೇಖರ ಗೌಡ ಕಾರಂಬಡೆ, ಉಮೇಶ ಅರಳ, ಹರೀಶ ಬಾಡಬೆಟ್ಟು, ರಾಘವ ಅಮೀನ್, ಶರತ್ ಕುಮಾರ್ ಕೊಯಿಲ, ಸುರೇಂದ್ರ ಅಣ್ಣಳಿಕೆ, ರಂಜನ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಚೌಟ, ಸಂತೋಷ್ ಕುಮಾರ್ ಬೆಟ್ಟು, ಧನಂಜಯ ಪಾಂಡವರಗುಡ್ಡೆ ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಸತೀಶ್ ಕೊಯಿಲ ಮತ್ತಿತರರು ಇದ್ದರು.
