ಬಂಟ್ವಾಳ ತಾಲೂಕಿನ ಕೊಯಾಲ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 66 ಮಂದಿ ವಿದ್ಯಾರ್ಥಿಗಳಲ್ಲಿ ಒಂಬತ್ತು ಮಂದಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು 41 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತಾರೆ.

ತನ್ವಿಪಿ ಸಾಲಿಯಾನ್ 588 ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಸೃಜನ್ 579 ಅಂಕಗಳು, ನಿಶಾ 566 ಅಂಕಗಳು, ರತಿಸ್ 561 ಅಂಕಗಳು ಹಾಗೂ ಪ್ರತಿಕ್ಷ 560 ಅಂಕಗಳೊಂದಿಗೆ ಉನ್ನತ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯನಿ ತಿಳಿಸಿರುತ್ತಾರೆ.
ವರದಿ ರಾಯಿ ರಾಜ ಕುಮಾರ

