ಮೂಡುಬಿದಿರೆ: ಮಿಜಾರು ಕೊಪ್ಪದಕುಮೇರು ನಿವಾಸಿ ಯುವಕನೋರ್ವ ಕೆಲಸಕ್ಕೆಂದು ಭಟ್ಕಳಕ್ಕೆ ಹೋಗಿದ್ದು, ಅಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮಿಜಾರು ಮರಕಡ ಬಳಿಯ ಕೊಪ್ಪದಕುಮೇರು ನಿವಾಸಿ ಶರತ್ (26) ಮೃತ ಯುವಕ. ಇವರು ಅಡುಗೆ ಕೆಲಸಕ್ಕೆಂದು ಭಟ್ಕಳಕ್ಕೆ ಹೋಗಿದ್ದು, ಗುರುವಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.

