ಕೋವಿ ಸಂಸ್ಕೃತಿ ನಮ್ಮ ಕೊಡಗಿನ ಹೆಮ್ಮೆಯ ಪ್ರತೀಕ :- ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

0
11

ವಿರಾಜಪೇಟೆ : ಶ್ರೀ ಗೋಪಾಲಕೃಷ್ಣ, ಈಶ್ವರ -ಶಾಸ್ತಾವು ದೇವಸ್ಥಾನದ ಜೀರ್ಣೋದರ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಗೋಪಾಲಕೃಷ್ಣ ಯುವ ಸಂಘ (ರಿ
ಅವಂದೂರು ಇವರ ಸಹಯೋಗದೊಂದಿಗೆ ನವರಾತ್ರಿ ಪ್ರಯುಕ್ತ ಸನ್ಮಾನ ಪುರಸ್ಕಾರ ಹಾಗೂ ಸಾಂಪ್ರದಾಯಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.

ಇಲ್ಲಿಯ ಅವಂದೂರು ಬಳಿಯ ಸರಕಾರಿ ಆಟದ ಮೈದಾನ ಈ ಕಾರ್ಯಕ್ರಮವು ಆಯೋಜನೆಗೊಂಡಿದ್ದು, ನಾಡಿನ ಅರೇಭಾಷಿಕ ಸಮುದಾಯದ ಅನೇಕ ಗುರಿಕಾರರು ತಮ್ಮ ಗುರಿಯನ್ನು ಪರೀಕ್ಷಿಸಲು ಪಣಕ್ಕೆ ಇಟ್ಟಿದ್ದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಸಹ ತೆಂಗಿನಕಾಯಿಗೆ ಗುರಿ ಹಿಡಿದು ಯಶಸ್ವಿಯಾಗಿ ಗುರಿಗೆ ತಾಗಿಸುವುದರ ಮೂಲಕ ಸಾರ್ವಜನಿಕರ ಮನಗೆದ್ದರು.

ಬಳಿಕ ಮಾತನಾಡಿದ ಮಾನ್ಯ ಶಾಸಕರು, ಕೋವಿ ಸಂಸ್ಕೃತಿಯು ಕೊಡಗಿನ ಪ್ರತಿಯೊಬ್ಬರ ಹೆಮ್ಮೆ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಮ್ಮ ಜನಗಳಿಗೆ ತಮ್ಮ ಜೀವನದಲ್ಲಿ ಕೋವಿ ಎಂಬುದು ಅವಿಭಾಜ್ಯ ಅಂಗ. ಇಂತಹ ಕಾರ್ಯಕ್ರಮಗಳು ಸಮುದಾಯದ ಎಲ್ಲರನ್ನು ಒಟ್ಟಿಗೆ ಸೇರಿಸುವುದರೊಂದಿಗೆ ಒಗ್ಗಟ್ಟು ಮೂಡಿಸುತ್ತದೆ ಹಾಗೂ ತಮ್ಮ ಒತ್ತಡದ ಕೃಷಿ ಚಟುವಟಿಕೆಗಳ ಮಧ್ಯೆಯು ಜನರಿಗೆ ಒಂದು ಮನರಂಜನೆ ನೀಡುವಲು ತುಂಬಾ ಸಹಕಾರಿಯಾಗಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಅವಂದೂರು ಶ್ರೀ ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷರಾದ ದೇವಾಯಿರ ಕೀರ್ತನ್, ಖಜಾಂಚಿ ಚಂದ್ರಪ್ರಕಾಶ್, ಪ್ರಮುಖರಾದ ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಪಟ್ಟಣ ದೀಪಕ್, ಸುರೇಶ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ