ಮೂಡುಬಿದಿರೆ : ಇಲ್ಲಿನ ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್ (ರಿ.) ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೇಂದ್ರ ಕಲಾಮಂದಿರದಲ್ಲಿ ಜರುಗಿದ ಶ್ರೀ ಶಾರದ ಮಹೋತ್ಸವ ವೈಭವವು ಶೋಭಯಾತ್ರೆ ಯೊಂದಿಗೆ ಸಂಪನ್ನಗೊಂಡಿತು .
ಮೂರು ದೇವರ ವಿಗ್ರಹವನ್ನು ಗುರುಪುರ ಶ್ರೀ ಸತ್ಯ ದೇವತಾ ಮಂದಿರದ ಚಂದ್ರಕಾಂತ ಭಟ್ ದಂಪತಿ ನೆರವೇರಿಸಿದರು . ರಾಜಮಟ್ಟದ ಯೋಗಾಸನ ಸ್ಪರ್ಧೆಯನ್ನು ಪ್ರಯೋಜಕತ್ವ ವಹಿಸಿದ ಕೆನರಾ ಬ್ಯಾಂಕ್ ಮೂಡುಬಿದಿರೆ ಶಾಖೆಯ ರಮಾನಂದರಾವ್ ಉದ್ಘಾಟಿಸಿದರು.
ಎಸ್ ಕೆ ಡಿ ಆರ್ ಡಿ ಪಿ ಶಾಂತಿ ವನ ಟ್ರಸ್ಟ್ ಯೋಗ ನಿರ್ದೇಶಕ ಶಶಿಕಾಂತ್, ಚಲನಚಿತ್ರ ನಟ ಶಾರದ ದೇವಿ ಸಂಯೋಜಕ ಶೇಖರ ಕರ್ತಳ ಉಪಸಿತರಿದ್ದರು. ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ , ಭಕ್ತಿಗೀತಾ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಉದ್ಯಮಿಗಳಾದ ಪ್ರಭಾ ಚಂದ್ರ ಜೈನ್ , ರಾಜೇಂದ್ರ ಕುಮಾರ್ ಬಾಲಚಂದ್ರ ನಾಯಕ್ ಮಿತ್ತ ಬೈಲು ಮತ್ತು ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ನಡೆಸಿದರು.
ಶ್ರೀ ದುರ್ಗಾ ನಮಸ್ಕಾರ ಚಂಡಿಕ ಹವನ ನಡೆಸಲಾಗಿದ್ದು , ಆ ದಿನಕಾಲ ನಿರಂತರ ಅನ್ನ ಸಂತರ್ಪನೆ ನಡೆಯಿತು. ಕಾರ್ಯಕ್ರಮ ಸಂಯೋಜಕ ಪ್ರಸನ್ನ ವಿ.ಶೆಟ್ಟಿ ಕಾ ರ್ಯಕ್ರಮ ನಿರ್ವಹಿಸಿದರು ಮಾನ್ಯ ಸಂಸದ ಶಾಸಕ ಉಮಾನಾತ್ ಕೋಟ್ಯಾನ್, ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್ , ಗಣೇಶ್ ಕಾರ್ಣಿಕ್ ಕೆಪಿಸಿಸಿ ಕಾರ್ಯದರ್ಶಿ, ಮಿಥುನ್ ರೈ ಮುಂತಾದ ಗಣ್ಯರು ಶ್ರೀ ದೇವರ ದರ್ಶನ ಪಡೆದು ಪ್ರಸಾರ ಸ್ವೀಕರಿಸಿದರು.
ದೇವರ ವಿಗ್ರಹವನ್ನು ವೈಭವ ಪೂರಕ ಮೆರವಣಿಗೆಯೊಂದಿಗೆ ಸಾಗಿ ಅಲಂಕಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಮಾನಸ ಗಂಗೋತ್ರಿಯಲ್ಲಿ ಜಲ ಸ್ತಂಭನಗೊಳಿಸಲಾಯಿತು . ಸರ್ವ ಸದಸ್ಯರು ಹಾಗೂ ಭಜನಾ ವೃಂದ ಸಂಪೂರ್ಣ ತೊಡಗಿಕೊಂಡಿತ್ತು.

