ಕುದ್ರಡ್ಕ : ಪಾಲೆದು ಶಾಲೆ ಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ

0
30

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರು ಪೂಜ್ಯ ಡಾ : ಡಿ ವಿರೇಂದ್ರ ಹೆಗ್ಡೆ ರವರು ಸಂಸದರ ನಿಧಿಯಿಂದ ಮಂಜೂರು ಮಾಡಿದ 1,45,000 ಮೌಲ್ಯದ ಸ್ಮಾರ್ಟ್ ಟಿವಿ ಯನ್ನು ಬಿಡುಗಡೆ ಮಾಡಲಾಯಿತು.

ಮುಖ್ಯ ಶಿಕ್ಷಕರು ಮಂಜುಳಾ ರವರು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆದುನಿಕ ಶಿಕ್ಷಣಕ್ಕೆ ಪೂರಕವಾಗಿ ತಾವು ನೀಡಿದ ಈ ಕೊಡುಗೆಯು ಶೇಕ್ಷಣಿಕ ಅಭಿವೃದ್ಧಿಗೆ ಬಹಳ ಸಹಕರಿಯಾಗಿದೆ ತಮ್ಮ ಈ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಣ ಮೇಲಿನ ಕಾಳಜಿಗೆ ನಾವು ಸದಾ ಋಣಿಯಾಗಿದ್ದೇವೆ ಎಂದರು.

ಕಾರ್ಯಕ್ರಮ ದಲ್ಲಿ ಶಾಲಾ SDMC ಅಧ್ಯಕ್ಷರು ಅನಿಲ ಕುಮಾರ, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಪಾರೆಂಕಿ C ಒಕ್ಕೂಟ ಅಧ್ಯಕ್ಷರು ಹರೀಶ, ಶಾಲಾ ಮುಖ್ಯ ಶಿಕ್ಷಕರು ಮಂಜುಳಾ, ಶ್ರದ್ದಾ, ವಿದ್ಯಾ,ಸೇವಾಪ್ರತಿನಿಧಿ ನಂದಿನಿ, ಹಾಗೂ sdmc ಉಪಾಧ್ಯಕ್ಷರು ಇಕ್ಬಾಲ್, ವಿದ್ಯಾರ್ಥಿ ಪಾಲಕರು ವಿಜಯಶ್ರೀ, ಶಶಿಕಲಾ, ಶಾಂತ, ಸುಜಾತ, ಚೈತ್ರ, ಸಂದ್ಯಾ, ಶಕುಂತಲಾ, ಸುಶೀಲ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here