ಅಖಿಲ ಭಾರತ ಬಿಲ್ಲವರ ಯೂನಿಯನ್ ನಿಂದ ಆ.23ರಂದು ಕುದ್ರೋಳಿ ನಾರಾಯಣ ಗುರು ಚಿತ್ತಾರ 2026 ಸ್ಪರ್ಧೆ

0
8

ಅಖಿಲ ಭಾರತ ಬಿಲ್ಲವರ ಯೂನಿಯನ್ ಅವರಿಂದ ನಾರಾಯಣ ಗುರುಗಳ 172ನೇ ಜನ್ಮ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಗುರು ಚಿತ್ತಾರ 2026 ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆ ಆಗಸ್ಟ್ 23 ರಂದು ಬೆಳಿಗ್ಗೆ 9:30ಕ್ಕೆ ಮಂಗಳೂರಿನ ಕುದುರೆಗಳು ನಾರಾಯಣ ಗುರು ಕಾಲೇಜಿನಲ್ಲಿ ನಡೆಯುತ್ತದೆ.

ಸ್ಪರ್ಧೆಯು ಸಬ್ ಜೂನಿಯರ್ ವಿಭಾಗ 567ನೇ ತರಗತಿ ನಾರಾಯಣ ಗುರುಗಳ ಭಾವಚಿತ್ರವನ್ನು ಪೆನ್ಸಿಲ್ ನಲ್ಲಿ ಬರೆಯುವುದು. ಜೂನಿಯರ್ ವಿಭಾಗ 8 9 10ನೇ ತರಗತಿ ವಿದ್ಯಾರ್ಥಿಗಳಿಗೆ ನಾರಾಯಣ ಗುರು ಭಾವಚಿತ್ರವನ್ನು ಕಲರ್ ನಲ್ಲಿ ಬಿಡಿಸುವುದು. ಸೀನಿಯರ್ ವಿಭಾಗ ಪಿಯುಸಿ ಮತ್ತು ಪದವಿ ತರಗತಿಗಳಿಗೆ ನಾರಾಯಣ ಗುರುಗಳ ಬದುಕಿನ ಘಟನೆಯ ಒಂದು ಸನ್ನಿವೇಶವನ್ನು ಕಲರ್ ನಲ್ಲಿ ಚಿತ್ರಿಸುವುದು. ಸ್ಪರ್ಧೆಗೆ ಎಲ್ಲರಿಗೂ ಮುಕ್ತ ಅವಕಾಶವಿದ್ದು ನೋಂದಣಿ ಸ್ಪರ್ಧೆಯ ದಿನ ಬೆಳಗ್ಗೆ 9: 00ಕ್ಕೆ. ಚಿತ್ರ ಬಿಡಿಸಲು ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ.

ಡ್ರಾಯಿಂಗ್ ಶೀಟ್ ಆಯೋಜಕರು ನೀಡಲಿದ್ದು ಅಗತ್ಯದ ಪರಿಕರಗಳನ್ನು ಸ್ಪರ್ಧಾಳುಗಳೆ ತರತಕ್ಕದ್ದು. ಪ್ರತಿ ವಿಭಾಗದಲ್ಲೂ ಪ್ರಥಮ ದ್ವಿತೀಯ ತೃತೀಯ ಹಾಗೂ ಚತುರ್ಥ ನಗದು ಬಹುಮಾನಗಳು, ಮರಳಿಕೆ ಹಾಗೂ ಐದು ಸಮಾಧಾನಕರ ಬಹುಮಾನಗಳು ಇರುತ್ತವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉಪಾಧ್ಯಕ್ಷ ಲೋಕನಾಥ ಅಮೀನ್, ಪ್ರಧಾನ ಕಾರ್ಯದರ್ಶಿ, ಜೀವನ್ ಕುಮಾರ್ ತೊಕ್ಕೊಟ್ಟು, ಸಂಘಟನಾ ಕಾರ್ಯದರ್ಶಿ ಎ ಜೆ ಶೇಖರ್, ಮಹಿಳಾ ಸಂಘದ ಅಧ್ಯಕ್ಷ ಸುಮಲತಾ ಸುವರ್ಣ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್